ಬಂಟ್ವಾಳ, ಡಿ. 09, 2020 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಕುಂಬಾರ/ ಕುಲಾಲರ ಯುವ ವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು ಇವುಗಳ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದ ಪ್ರಧಾನ ಸಮಾರಂಭದ ಪ್ರಯುಕ್ತ ಸ್ವಜಾತಿ ಬಾಂಧವರಿಗೆ ಸ್ನೇಹ ಮಿಲನ ಬಂಟ್ವಾಳ ತಾಲೂಕು ಮಟ್ಟದ ಸ್ಪರ್ಧಾಕೂಟ ಡಿಸೆಂಬರ್ 27 ರಂದು ಬಿ.ಸಿ.ರೋಡಿನ ಪೆÇಸಳ್ಳಿ ಸಭಾಭವನದಲ್ಲಿ ನಡೆಯಲಿದೆ.
ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ 1ರಿಂದ 4ನೇ ತರಗತಿ ಒಳಗಿನ ಮಕ್ಕಳಿಗೆ ನಮ್ಮ ಪರಿಸರ ಎಂಬ ವಿಷಯದಲ್ಲಿ, 5 ರಿಂದ 8ನೇ ತರಗತಿ ಮಕ್ಕಳಿಗೆ ಕರಾವಳಿ ಅಲೆಗಳು ಎಂಬ ವಿಷಯದಲ್ಲಿ, 9 ರಿಂದ 12ನೇ ತರಗತಿ ಮಕ್ಕಳಿಗೆ ಕುಂಬಾರ ಮಡಿಕೆ ಮಾಡುವುದು ಎಂಬ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಅದೇ ರೀತಿ ಪೇಪರ್ ಕ್ರಾಫ್ಟ್, ಮಹಿಳೆಯರಿಗಾಗಿ ತೆಂಗಿನ ಗರಿ ಹೆಣೆಯುವುದು, ಹೂ ಕಟ್ಟುವ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಪುರುಷರಿಗಾಗಿ ಕ್ಯಾರಂ ಬೋರ್ಡ್ ಸ್ಪರ್ಧೆ, 5 ವರ್ಷದ ಒಳಗಿನ ಮಕ್ಕಳಿಗೆ ಭಕ್ತ ಕುಂಬಾರ ಛದ್ಮವೇಷ ಸ್ಪರ್ಧೆ, ಮುಕ್ತ ವಿಭಾಗದಲ್ಲಿ ಡ್ಯಾನ್ಸ್ ಧಮಕಾ-ಡ್ಯಾನ್ಸ್ ಸ್ಪರ್ಧೆ, ತುಳುನಾಡ ಪಾಡ್ದನ ಸ್ಪರ್ಧೆ, ಕಸದಿಂದ ರಸ, ಕ್ಲೇ ಮಾಡೆಲಿಂಗ್ ಸ್ಪರ್ಧೆ ನಡೆಯಲಿರುವುದು ಎಂದು ವೇದಿಕೆ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು, ಕಾರ್ಯದರ್ಶಿ ಪುರುಷೋತ್ತಮ ಎಸ್. ಮೈರಾನ್‍ಪಾದೆ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment