ಕಾವಳಮೂಡೂರು : ಚುನಾವಣಾ ಫಲಿತಾಂಶಕ್ಕೂ ಮುನ್ನ ಗ್ರಾ ಪಂ ಅಭ್ಯರ್ಥಿ ಸಾವು - Karavali Times ಕಾವಳಮೂಡೂರು : ಚುನಾವಣಾ ಫಲಿತಾಂಶಕ್ಕೂ ಮುನ್ನ ಗ್ರಾ ಪಂ ಅಭ್ಯರ್ಥಿ ಸಾವು - Karavali Times

728x90

28 December 2020

ಕಾವಳಮೂಡೂರು : ಚುನಾವಣಾ ಫಲಿತಾಂಶಕ್ಕೂ ಮುನ್ನ ಗ್ರಾ ಪಂ ಅಭ್ಯರ್ಥಿ ಸಾವು



ಬಂಟ್ವಾಳ, ಡಿ. 29, 2020 (ಕರಾವಳಿ ಟೈಮ್ಸ್) : ತಾಲೂಕಿನ ಗ್ರಾಮ ಪಂಚಾಯತ್ ಅಭ್ಯರ್ಥಿಯೋರ್ವರು ಚುನಾವಣಾ ಫಲಿತಾಂಶಕ್ಕೂ ಮೊದಲೇ ಔಷಧಿ ಎಂದು ತಪ್ಪಾಗಿ ತಿಳಿದು ಕೀಟ ನಾಶಕ ಸೇವಿಸಿದ ಪರಿಣಾಮ ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ. 

ಕಾವಳಮೂಡೂರು ಗ್ರಾಮದ ಅಗತ್ರ್ಯಾರು ನಿವಾಸಿ, ಕಾವಳಮೂಡೂರು ಗ್ರಾಮ ಪಂಚಾಯತಿನ 3ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಂತ್ ಪ್ರಭು (58) ಅವರು ಡಿ 21 ರಂದು ಮನೆಯಲ್ಲಿ ಔಷಧಿ ಬಾಟ್ಲಿಯಲ್ಲಿ ಶೇಖರಿಸಿಟ್ಟಿದ್ದ ಕೀಟ ನಾಶಕವನ್ನು ಬಾಯಿ ಹುಣ್ಣಿನ ಔಷಧಿ ಎಂದು ತಿಳಿದು ಸೇವಿಸಿದ್ದರು. ಮರುದಿನ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅವರು ಮತದಾನ ಮಾಡಿದ್ದಲ್ಲದೆ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮತದಾರರನ್ನು ಓಲೈಸುವ ಕಾರ್ಯವನ್ನೂ ಉತ್ಸಾಹದಿಂದಲೇ ಮಾಡಿದ್ದರು. ಆದರೆ ರಾತ್ರಿ ವೇಳೆಗೆ ಅವರು ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಮನೆ ಮಂದಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನದ ವೇಳೆಗೆ ಮೃತಪಟಿದ್ದಾರೆ.

ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದ ಜಯಂತ ಪ್ರಭು ಅವರು ಎರಡು ಅವಧಿಯಲ್ಲಿ ಕಾವಳಮೂಡೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಒಂದು ಬಾರಿ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 









  • Blogger Comments
  • Facebook Comments

0 comments:

Post a Comment

Item Reviewed: ಕಾವಳಮೂಡೂರು : ಚುನಾವಣಾ ಫಲಿತಾಂಶಕ್ಕೂ ಮುನ್ನ ಗ್ರಾ ಪಂ ಅಭ್ಯರ್ಥಿ ಸಾವು Rating: 5 Reviewed By: karavali Times
Scroll to Top