ಬಂಟ್ವಾಳ, 02, ಡಿಸೆಂಬರ್, 2020 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಸಮೀಪದ ಕೆ ಸಿ ರೋಡು ಬಳಿ ಮಂಗಳವಾರ ರಾತ್ರಿ ರಾಷ್ಷ್ರೀಯ ಹೆದ್ದಾರಿಯಲ್ಲಿ ಸಂಚಾರದಲ್ಲಿರುವ ಸಂದರ್ಭದಲ್ಲೇ ಚಾಲಕನ ನಿಯಂತ್ರಣ ಮೀರಿದ ಪರಿಣಾಮ 16 ಚಕ್ರದ ಘನ ಲಾರಿ ರಸ್ತೆ ಬದಿಗೆ ಉರುಳಿ ಬಿದ್ದು ಚಾಲಕ ನೆಲ್ಯಾಡಿ ಸಮೀಪದ ಕೊಕ್ಕಡ ನಿವಾಸಿ ಅಕ್ರಂ ಭಾಷಾ ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ವಿದ್ಯುತ್ ಪರಿಕರ (ಕ್ವಾಯಿಲ್) ತುಂಬಿಕೊಂಡು ಹೋಗುತ್ತಿದ್ದ ಘನ ಗಾತ್ರದ ಲಾರಿ ಕೆ ಸಿ ರೋಡು ತಲುಪುತ್ತಲೇ ರಸ್ತೆ ಬದಿಯ ಅಂಚಿಗೆ ಚಕ್ರ ಸಿಲುಕಿದ ಪರಿಣಾಮ ಲಾರಿ ಗಾತ್ರ ತಾಳಲಾರದೆ ಚಾಲಕನ ನಿಯಂತ್ರಣ ಮೀರಿದೆ. ಪರಿಣಾಮ ಲಾರಿ ರಸ್ತೆ ಬದಿಗೆ ಸಂಪೂರ್ಣವಾಗಿ ಉರುಳಿ ಬಿದ್ದಿದೆ. ಘಟನೆಯಿಂದ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಜಮಾಯಿಸಿದ ಸ್ಥಳೀಯರು ಚಾಲಕ ಅಕ್ರಂನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಲಾರಿಯನ್ನು ಮೇಲಕ್ಕೆತ್ತುವ ಕಾರ್ಯ ನಡೆದಿದೆ.
0 comments:
Post a Comment