ನವದೆಹಲಿ, ಡಿ. 31, 2020 (ಕರಾವಳಿ ಟೈಮ್ಸ್) : ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಜನವರಿ 1 ರಿಂದ ಜಿಯೋ ತನ್ನ ಗ್ರಾಹಕರಿಗೆ ಬಿಗ್ ಆಫರ್ ಪ್ರಕಟಿಸಿದೆ.
ಹೊಸ ವರ್ಷದಿಂದ ಎಲ್ಲಾ ದೇಶೀಯ ವಾಯ್ಸ್ ಕರೆಗಳಿಗೆ ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಕೊನೆಯಾಗಲಿದ್ದು ಜಿಯೋ ತನ್ನೆಲ್ಲಾ ಆಫ್-ನೆಟ್ ದೇಶೀಯ ವಾಯ್ಸ್ ಕರೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ. ಆನ್-ನೆಟ್ ದೇಶೀಯ ವಾಯ್ಸ್ ಕರೆಗಳು ಈಗಾಗಲೇ ಜಿಯೋ ನೆಟ್‌ವರ್ಕ್‌ನಲ್ಲಿ ಉಚಿತವಾಗಿದೆ.
ಸೆಪ್ಟೆಂಬರ್ 2019 ರಲ್ಲಿ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಲ್ ಆಂಡ್ ಕೀಪ್ ರಿಜೀಮ್ ಗಳ ಅನುಷ್ಠಾನಗೊಳಿಸುವ ಸಮಯವನ್ನು ಜನವರಿ 1ರಿಂದ ಆಚೆಗೆ ವಿಸ್ತರಿಸಿದಾಗ, ಜಿಯೋ ತನ್ನ ಗ್ರಾಹಕರಿಗೆ ಅನ್ವಯವಾಗುವ ಐಯುಸಿ ಶುಲ್ಕಕ್ಕೆ ಸಮಾನವಾಗಿ ಆಫ್-ನೆಟ್ ವಾಯ್ಸ್ ಕರೆಗಳಿಗೆ ಶುಲ್ಕ ವಿಧಿಸುವುದನ್ನು ಪ್ರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು. ಹಾಗೆ ಮಾಡುವಾಗ, ಜಿಯೋ ತನ್ನ ಬಳಕೆದಾರರಿಗೆ ಟ್ರಾಯ್ ಐಯುಸಿ ಶುಲ್ಕವನ್ನು ರದ್ದುಗೊಳಿಸುವ ಸಮಯದವರೆಗೆ ಮಾತ್ರ ಇದು ಮುಂದುವರಿಯುತ್ತದೆ ಎಂಬ ಭರವಸೆ ನೀಡಿತ್ತು. ಈ ಭರವಸೆಯಂತೆ ಇದೀಗ ಜಿಯೋ ಆಫ್-ನೆಟ್ ಧ್ವನಿ ಕರೆಗಳನ್ನು ಮತ್ತೆ ಉಚಿತಗೊಳಿಸಿದೆ ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾನ್ಯ ಭಾರತೀಯನನ್ನು VoLTE ನಂತಹ ಸುಧಾರಿತ ತಂತ್ರಜ್ಞಾನಗಳ ಫಲಾನುಭವಿಗಳನ್ನಾಗಿ ಮಾಡುವ ಬದ್ಧತೆಯ ಬಗ್ಗೆ ಜಿಯೋ ದೃಢವಾಗಿದ್ದು, ಜಿಯೋ ಗ್ರಾಹಕರ ಅವಲಂಬಿತ ಸಂಸ್ಥೆಯಾಗಿದೆ. ಪ್ರತಿಯೊಬ್ಬ ಬಳಕೆದಾರರ ಬಗ್ಗೆ ಜಿಯೋ ಕಾಳಜಿ ವಹಿಸಲಿದೆ . ನಮ್ಮ ಎಲ್ಲ ಬಳಕೆದಾರರು ಜಿಯೋ ಜೊತೆ ಉಚಿತ ವಾಯ್ಸ್ ಕರೆಗಳನ್ನು ಆನಂದಿಸುತ್ತಾರೆ ಎಂದು ಅದು ಹೇಳಿದೆ.
ಡಿಜಿಟಲ್ ಸೊಸೈಟಿಯ ಅಡಿಪಾಯವನ್ನು ಹಾಕಲು ಜಿಯೋ ಬದ್ಧವಾಗಿದೆ ಎಂದು, ಎಲ್ಲವು, ಎಲ್ಲರೂ, ಎಲ್ಲೆಡೆ ಜಾಗತಿಕವಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆಯೊಂದಿಗೆ ಸಂಪರ್ಕ ಹೊಂದಬೇಕಿದೆ. ಅತ್ಯಾಧುನಿಕ ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಿಗೆ ಪ್ರವೇಶವನ್ನು ಹೊಂದಬೇಕೆಂದು ಜಿಯೋ ಬಯಸುತ್ತದೆ. ತಾಂತ್ರಿಕ ನಾವೀನ್ಯತೆಯ ಮೂಲಕ, ಕಸ್ಟಮರ್ ಫಸ್ಟ್ ಅಪ್ರೋಚ್ ನೊಂದಿಗೆ ಜಿಯೋ ತನ್ನ ಬಳಕೆದಾರರಿಗೆ ಕ್ರಾಂತಿಕಾರಿ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
0 comments:
Post a Comment