ಕಡಬ, ಡಿ. 25, 2020 (ಕರಾವಳಿ ಟೈಮ್ಸ್) : ಭಾರತೀಯ ಜೈನ್ ಮಿಲನ್ ವಲಯ 8, ಇದರ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್‍ಬುಕ್ ಫೇಜ್ ಜಂಟಿಯಾಗಿ ನಡೆಸಿದ ಜಿನಸಮ್ಮಿಲನ ಕಾರ್ಯಕ್ರಮ ಅಂತರ್ರಾಷ್ಟ್ರೀಯ ಜಿನಸಮ್ಮಿಲನ-2020 ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ನಡೆದ ‘ಜೈನ ಧರ್ಮ’ ವಿಷಯಾಧಾರಿತ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಕಡಬದ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಇವರು ಕಡಬ ತಾಲೂಕು, ನೂಜಿಬಾಳ್ತಿಲ ಹೊಸಂಗಡಿ ಬಸದಿ ನಿವಾಸಿ ಧರಣೇಂದ್ರ ಇಂದ್ರ ಹಾಗೂ ಮಂಜುಳಾ ದಂಪತಿಯ ಪುತ್ರ.
0 comments:
Post a Comment