ನವದೆಹಲಿ, ಡಿ. 24, 2020 (ಕರಾವಳಿ ಟೈಮ್ಸ್) : ಹೊಸ ವರ್ಷದಿಂದ ದೇಶದ ಎಲ್ಲಾ ವಾಹನಗಳಿಗೆ ಫಾಸ್ಟ್‍ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 1, 2021 ರಿಂದ ಎಲ್ಲಾ ಮಾದರಿಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗಲು ಫಾಸ್ಟ್ ಟ್ಯಾಗ್‍ಗಳನ್ನು 2016 ರಲ್ಲಿ ಪರಿಚಯಿಸಲಾಯಿತು. ಟ್ಯಾಗ್‍ಗಳನ್ನು ಕಡ್ಡಾಯಗೊಳಿಸುವುದರಿಂದ ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗುವುದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ನಿಲ್ಲುವುದು ತಪ್ಪುತ್ತದೆ.
2016 ರಿಂದ ಪ್ರಾರಂಭಿಸಿದ ಈ ಫಾಸ್ಟ್ಯಾಗ್ ನಾಲ್ಕು ಬ್ಯಾಂಕುಗಳು ಒಟ್ಟಾಗಿ ಒಂದು ಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್ ಒದಗಿಸಿದ್ದವು. 2017ರ ಹೊತ್ತಿಗೆ ಅದು ಏಳು ಲಕ್ಷಕ್ಕೇರಿತು. 2018ರಲ್ಲಿ 34 ಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್‍ಗಳನ್ನು ಅಳವಡಿಸಲಾಗಿದೆ.
0 comments:
Post a Comment