ಬಂಟ್ವಾಳ, ಡಿ. 15, 2020 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರಿಗೆ ವಿಟ್ಲ ಮೆಸ್ಕಾಂ ಅಧಿಕ ಬಿಲ್ ನೀಡಿ, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಆದೇಶ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ವಿದ್ಯುತ್ ಬಿಲ್‍ನಲ್ಲಿ ಬಾರೀ ರಾದ್ಧಾಂತ ಆಗುತ್ತಿರುವ ಹಿನ್ನಲೆಯಲ್ಲಿ ಮೆಸ್ಕಾಂನ ಈ ಕ್ರಮವನ್ನು ಪ್ರಶ್ನಿಸಿ ಕುಶಾಲಪ್ಪ ಅವರು ವಕೀಲರ ಮುಖಾಂತರ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.
ಕುಶಾಲಪ್ಪರ ದೂರು ಆಲಿಸಿದ ಜಿಲ್ಲಾ ಗ್ರಾಹಕರ ವೇದಿಕೆಯು ಮೆಸ್ಕಾಂನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಾಗೂ ಅಧಿಕ ಬಿಲ್ ಪಾವತಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ದೂರುದಾರರ ಪರವಾಗಿ ನ್ಯಾಯವಾದಿ ಮೋಹನ್ ಕುಮಾರ್ ಎನ್ ಕಡೇಶಿವಾಲಯ ಅವರು ವಾದಿಸಿದ್ದರು. ಈ ತಡೆಯಾಜ್ಞೆಯು ಮುಂದಿನ ವಿಚಾರಣೆಯವರೆಗೂ ಜಾರಿಯಲ್ಲಿರುತ್ತದೆ.
0 comments:
Post a Comment