ಬಂಟ್ವಾಳ, ಡಿ. 11, 2020 (ಕರಾವಳಿ ಟೈಮ್ಸ್) : ತಾಲೂಕಿನ ಒಟ್ಟು 57 ಗ್ರಾಮ ಪಂಚಾಯತ್ ಗಳ 837 ಸ್ಥಾನಗಳಿಗೆ ಡಿ 22 ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆ ದಿನವಾಗಿದ್ದು, ಒಟ್ಟು 2552 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ 14 ರಂದು ಸೋಮವಾರ ನಾಮಪತ್ರ ವಾಪಾಸು ಪಡೆಯಲು ಅಂತಿಮ ದಿನವಾಗಿದೆ. ಸೋಮವಾರ ಸಂಜೆಯ ವೇಳೆಗೆ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ. ತಾಲೂಕಿನಲ್ಲಿ ಮೊದಲ ಹಂತವಾಗಿರುವ ಡಿ 22 ರಂದು ಮತದಾನ ನಡೆಯಲಿದ್ದು, ಡಿ 30 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
0 comments:
Post a Comment