ಬಂಟ್ವಾಳ ಸೌಹಾರ್ದ ಟ್ರೋಫಿ ಗೆದ್ದುಕೊಂಡ ಉರ್ವ ಯಂಗ್ ಫ್ರೆಂಡ್ಸ್
ಬಂಟ್ವಾಳ, ಡಿ. 28, 2020 (ಕರಾವಳಿ ಟೈಮ್ಸ್) : ಕ್ರೀಡೆಯಲ್ಲಿ ಕ್ರೀಡಾ ಸ್ಪೂರ್ತಿಯಿಂದ ಯುವ ಜನಾಂಗ ಹೆಚ್ಚಾಗಿ ಭಾಗವಹಿಸಿದಾಗ ದುಶ್ಚಟಗಳಿಂದ ದೂರವಾಗಲು ಸಾಧ್ಯ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ಎಸ್.ಕೆ. ಫ್ರೆಂಡ್ಸ್ ಹಾಗೂ ಅಲೆತ್ತೂರ್ ಸ್ಟ್ರೈಕರ್ಸ್ ಬಿ.ಸಿ.ರೋಡು ಇವುಗಳ ಜಂಟಿ ಆಶ್ರಯದಲ್ಲಿ ಬಿ ಸಿ ರೋಡಿನ ಕೇಂದ್ರ ಮೈದಾನದಲ್ಲಿ ಜಿಲ್ಲೆಯ ಪ್ರತಿಷ್ಠಿತ 24 ತಂಡಗಳ 11 ಜನರ ಫುಲ್ ಗ್ರೌಂಡ್ ಮಾದರಿಯ ನಿಗದಿತ 8 ಓವರ್‍ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ‘ಸೌಹಾರ್ದ ಟ್ರೋಫಿ-2020’ ರ ಸೋಮವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಹದಗೆಡದಂತೆ ಕಾಪಾಡಲು ಕೂಡಾ ಕ್ರೀಡೆಗಳು ಪೂರಕವಾಗಿದೆ ಎಂದರು.
ಅಂಡರ್ ಆರ್ಮ್ ಕ್ರೀಡೆಯ ಜೊತೆಗೆ ಓವರ್ ಆರ್ಮ್ ಕ್ರಿಕೆಟ್‍ಗೂ ಸ್ಥಳೀಯ ಯುವಕರು ಹೆಚ್ಚಿನ ಮಹತ್ವ ನೀಡಬೇಕು. ಹಾಗಾದಾಗ ಸ್ಥಳೀಯ ಯುವಕರು ರಾಷ್ಷ್ರ-ಅಂತರಾಷ್ಟ್ರ ಮಟ್ಟದಲ್ಲೂ ಗುರುತಿಸುವಂತಾಗಲು ಸಾಧ್ಯ ಎಂದರು.
ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಸಮಾಜದ ಶಾಂತಿ-ಸೌಹಾರ್ದತೆ, ಸಾಮರಸ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಯುವಕರು ಜಾತಿ-ಮತ-ಧರ್ಮ-ವರ್ಗ ಬೇಧ ಮರೆತು ಪರಸ್ಪರ ಭುಜಕ್ಕೆ ಕೈ ಹಾಕಿ ಸೌಹಾರ್ದತೆ ಮರೆಯುವ ಕ್ರೀಡೆಗೆ ಅತೀ ಹೆಚ್ಚಿನ ರೀತಿಯ ಪೆÇ್ರೀತ್ಸಾಹ ನೀಡಬೇಕಾದುದು ಕಾಲದ ಬೇಡಿಕೆಯಾಗಿದೆ ಎಂದರಲ್ಲದೆ ಕ್ರೀಡೆಯಲ್ಲಿ ಬಹುಮಾನಗಳು ಕೇವಲ ಔಪಚಾರಿಕ ಮಾತ್ರ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಯುವಕರು ಕ್ರೀಡಾ ಸ್ಪೂರ್ತಿಯನ್ನು ಪ್ರಮುಖವಾಗಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉದ್ಯಮಿಗಳಾದ ರಶೀದ್ ಏಶಿಯನ್, ರಫೀಕ್ ಕೆಳಗಿನಪೇಟೆ, ಕಾಸಿಂ ಶಾಂತಿಅಂಗಡಿ, ಧನರಾಜ್ ಅಂಚನ್, ಜಮಾಲ್ ಪುಂಚಮೆ, ಹರೀಶ್ ಪಡೀಲ್, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಲೆತ್ತೂರ್ ಸ್ಟ್ರೈಕರ್ಸಿನ ರಂಜಿತ್ ಬಿ.ಸಿ.ರೋಡು ಸ್ವಾಗತಿಸಿ, ಎಸ್.ಕೆ. ಫ್ರೆಂಡ್ಸ್ ಇದರ ಸಂತೋಷ್ ಬಂಟ್ವಾಳ ವಂದಿಸಿದರು. ಸತೀಶ್, ಗೋಪಿ, ಪ್ರಶಾಂತ್ ಬಂಟ್ವಾಳ ಮೊದಲಾದವರು ವೀಕ್ಷಕ ವಿವರಣೆ ನೀಡಿದರು. ರೊಲಾಂಡ್ ಪಿಂಟೋ, ಹರೀಶ್ ಪಡೀಲ್, ಸುರೇಶ್ ಮೂಡಬಿದ್ರೆ, ಶಾಕಿರ್ ಜಾಕಿ, ಹಕೀಂ ಸೂರಿಂಜೆ, ಇಮ್ರಾನ್ ಫರಂಗಿಪೇಟೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಉರ್ವ ಯಂಗ್ ಫ್ರೆಂಡ್ಸ್ ತಂಡ ಚಾಂಪಿಯನ್
ಯಂಗ್ ಫ್ರೆಂಡ್ಸ್ ಉರ್ವ ತಂಡವು ಕೆ.ಎಫ್.ಸಿ. ಕೃಷ್ಣಾಪುರ ತಂಡವನ್ನು ಮಣಿಸಿ ಕೂಟದ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಸೌಹಾರ್ದ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇಂಡಿಯನ್ ರೈಡರ್ಸ್ ವಿಟ್ಲ ಹಾಗೂ ಕೆ.ಎಫ್.ಸಿ. ಕೋಡಿಕಲ್ ತಂಡ ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಯಂಗ್ ಫ್ರೆಂಡ್ಸ್ ಉರ್ವ ತಂಡದ ತನ್ವೀರ್ ಪಂದ್ಯಶ್ರೇಷ್ಠ ಹಾಗೂ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕೆ.ಎಫ್.ಸಿ.ಕೃಷ್ಣಾಪುರ ತಂಡದ ಆಟಗಾರರಾದ ಮುಬಶ್ಶಿರ್ ಉತ್ತಮ ದಾಂಡಿಗ ಹಾಗೂ ಅರ್ಶದ್ ಎಲ್.ಟಿ. ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು. ಅಲೆತ್ತೂರು ಸ್ಟ್ರೈಕರ್ಸ್ ತಂಡದ ಆಟಗಾರ ಅಲ್ತಾಫ್ ವಾಲ್ಪಾಡಿ ವೇಗದ ಅರ್ಧ ಶತಕ (20 ಎಸೆತಗಳಲ್ಲಿ 50 ರನ್)ಕ್ಕಾಗಿ ಗೌರವ ಪ್ರಶಸ್ತಿ ಪಡೆದುಕೊಂಡರು.
0 comments:
Post a Comment