ಬಂಟ್ವಾಳ, ಡಿ. 15, 2020 (ಕರಾವಳಿ ಟೈಮ್ಸ್) : ತಾಲೂಕಿನ ಒಟ್ಟು 57 ಗ್ರಾಮ ಪಂಚಾಯತ್‍ಗಳ 837 ಸ್ಥಾನಗಳಿಗೆ ಡಿ 22 ರಂದು ನಡೆಯುವ ಚುನಾವಣೆಗೆ ಒಟ್ಟು 1925 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೋಮವಾರ ನಾಮಪತ್ರ ಪರಿಶೀಲನೆ ಮುಗಿದಿದ್ದು, ಒಟ್ಟು ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ಒಟ್ಟು ಸಲ್ಲಿಕೆಯಾಗಿದ್ದ 2552 ಮಂದಿ ಉಮೇದುವಾರರ ಪೈಕಿ 72 ಮಂದಿಯ ಉಮೇದುವಾರಿಕೆ ತಿರಸ್ಕøತಗೊಂಡಿತ್ತು. 550 ಮಂದಿ ನಾಮತ್ರ ವಾಪಾಸು ಪಡೆದುಕೊಂಡರೆ, 15 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಅಂತಿಮವಾಗಿ 1925 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಇಡ್ಕಿದು ಗ್ರಾಮ ಪಂಚಾಯತಿನಲ್ಲಿ 4 ಮಂದಿ, ವಿಟ್ಲಪಡ್ನೂರು ಹಾಗೂ ಪುಣಚ ಪಂಚಾಯಿತಿನಲ್ಲಿ ತಲಾ ಇಬ್ಬರು, ಫಜೀರು, ಬಾಳ್ತಿಲ, ಕರಿಯಂಗಳ, ತುಂಬೆ, ಅಮ್ಮುಂಜೆ, ಮೇರಮಜಲು ಹಾಗೂ ಅಮ್ಟಾಡಿ ಪಂಚಾಯತಿನಲ್ಲಿ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನಲ್ಲಿ ಮೊದಲ ಹಂತವಾಗಿರುವ ಡಿ 22 ರಂದು ಮತದಾನ ನಡೆಯಲಿದ್ದು, ಡಿ 30 ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
0 comments:
Post a Comment