ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಭಾನುವಾರ ರಾತ್ರಿ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ನಡೆದ ಶಂಸುಲ್ ಉಲಮಾ (ಖ.ಸಿ) ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಲ್ಲಾಹನ ಆದೇಶಗಳನ್ನು ಶಿರಸಾ ವಹಿಸಿ ಜೀವಿಸಿ, ಅವನ ಸಂತೃಪ್ತಿ ಗಳಿಸಿ ಮರಣ ಹೊಂದಿದ ಅಲ್ಲಾಹನ ಇಷ್ಟ ದಾಸರನ್ನು ಪ್ರೀತಿಸಿ ಗೌರವಿಸಿದಾಗ ಅಲ್ಲಾಹನ ಸಾಮೀಪ್ಯ ಸಂಪಾದಿಸಲು ಸಾಧ್ಯ ಎಂದರು.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಿದ್ದರು. ಖಲೀಲ್ ದಾರಿಮಿ ಉದ್ಘಾಟಿಸಿದರು. ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಅನುಸ್ಮರಣಾ ಭಾಷಣಗೈದರು.
ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಪಿ.ಬಿ. ಹಾಮದ್ ಹಾಜಿ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಮದನಿ, ಅಬೂಬಕರ್ ಮದನಿ, ಹನೀಫ್ ಯಮಾನಿ, ಅಬ್ದುಲ್ಲಾಹ್ ರಬ್ಬಾನಿ, ಅಬೂಬಕರ್ ಹಾಜಿ ಎನ್.ಬಿ., ಅಬ್ದುಲ್ ಮಜೀದ್ ಬೋಳಂಗಡಿ, ಇಸಾಕ್ ಫೇಶನ್ ವೇರ್, ಮುಹಮ್ಮದ್ ಶಫೀಕ್, ಬಶೀರ್ ಕೆ4, ರಫೀಕ್ ಇನೋಳಿ, ಸಿ.ಪಿ. ಶಾಕಿರ್, ಅಬ್ದುಲ್ ಜಬ್ಬಾರ್ ಬುರ್ಖಾ, ಸಲಾಂ ಸೆಂಟರಿಂಗ್, ಸುಲೈಮಾನ್ ಬೋಳಂಗಡಿ, ಅಬ್ದುಲ್ ಖಾದರ್ ಪೈಂಟರ್, ಹನೀಫ್ ಡ್ರೈ ಫಿಶ್, ಅಬ್ದುಲ್ ಮುತ್ತಲಿಬ್, ಮುಹಮ್ಮದ್ ಬಂಗ್ಲೆಗುಡ್ಡೆ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಇರ್ಶಾದ್ ದಾರಿಮಿ ನೇತೃತ್ವದಲ್ಲಿ
ಶಂಸುಲ್ ಉಲಮಾ ಮೌಲಿದ್ ನಡೆಯಿತು. ಶಾಖಾ ಕಾರ್ಯದರ್ಶಿ ಅಬ್ದುಲ್ ಬಶೀರ್ ಎನ್. ಸ್ವಾಗತಿಸಿ, ಅಬ್ದುಲ್ ಅಝೀಝ್ ಪಿ.ಐ. ವಂದಿಸಿದರು.
0 comments:
Post a Comment