ಬಂಟ್ವಾಳ, ಡಿ. 29, 2020 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಅಮ್ಮುಂಜೆ ಸೆಕ್ಟರ್ ಇದರ ನೂತನ ಅಧ್ಯಕ್ಷರಾಗಿ ಸೈಫುಲ್ಲಾ ಸಖಾಫಿ ಬಡಕಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಮ್ ವಾರಕ್ಕೊಡಿ ಹಾಗೂ ಕೋಶಾಧಿಕಾರಿಯಾಗಿ ಖಲೀಲ್ ರಹಿಮಾನ್ ಅಬ್ಬೆಟ್ಟು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಇಲ್ಲಿನ ತಾಜುಲ್ ಉಲಮಾ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರುಗಳಾಗಿ ನೌಫಲ್ ದೆಮ್ಮಲೆ, ನೌಶಾದ್ ಮಲ್ಲೂರು, ಕಾರ್ಯದರ್ಶಿಗಳಾಗಿ ಮುಹಮ್ಮದ್ ಶರೀಫ್ ಬಡಕಬೈಲ್, ಅಬ್ದುಲ್ ಫತಾಹ್ ಅಮ್ಮುಂಜೆ, ಹಂಝ ಹಮೀದ್ ತಾಳಿಪ್ಪಾಡಿ, ಮುಹಮ್ಮದ್ ನಿಝಾಂ ಅಮ್ಮುಂಜೆ, ಮೂಸಾ ಶಾಕೀರ್ ಉದ್ದಬೆಟ್ಟು, ಅಬ್ದುಲ್ ಶಮೀರ್ ಮಲ್ಲೂರು ಹಾಗೂ 14 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮೂಡಬಿದ್ರಿ ಡಿವಿಷನ್ನಿನ ಉಬೈದುಲ್ಲಾ ಸಾಖಾಫಿ ಸಭೆಯನ್ನು ಉದ್ಘಾಟಿಸಿದರು. ಹಂಝ ಹಮೀದ್ ಟಿ.ಎಚ್. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಹಕೀಮ್ ವರಕ್ಕೋಡಿ ಲೆಕ್ಕ ಪತ್ರ ಮಂಡಿಸಿದರು. ಡಿವಿಷನ್ ಅಧ್ಯಕ್ಷ ರಿಯಾಝ್ ಸಅದಿ, ಕಾರ್ಯದರ್ಶಿ ಸಿದ್ದಿಕ್ ಬಜ್ಪೆ, ವೆಸ್ಟ್ ಝೋನ್ ಸದಸ್ಯರಾದ ಮನ್ಸೂರ್ ಅಮ್ಮುಂಜೆ, ಎಸ್.ವೈ.ಎಸ್. ಪ್ರಮುಖರಾದ ಇಕ್ಬಾಲ್ ಅಮ್ಮುಂಜೆ. ಹಮೀದ್ ಬದ್ರಿಯಾ ನಗರ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
0 comments:
Post a Comment