ಬಂಟ್ವಾಳ, ಡಿ. 27, 2020 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಸಂಸ್ಥೆಯ ಧ್ವಜ ದಿನಾಚರಣೆ ಅಂಗವಾಗಿ ಧ್ಜಜಾರೋಹಣ ಪಾಣೆಮಂಗಳೂರು-ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವಠಾರದಲ್ಲಿ ಭಾನುವಾರ (ಡಿ 27) ಬೆಳಿಗ್ಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೊ ಧ್ವಜಾರೋಹಣಗೈದರು. ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಉದ್ಘಾಟಿಸಿದರು. ಬಶೀರ್ ಎನ್ ಸ್ವಾಗತಿಸಿ, ಅಬ್ದುಲ್ ಅಝೀಝ್ ಪಿ.ಐ. ವಂದಿಸಿದರು. ಮುಹಮ್ಮದ್ ಶಫೀಕ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆಯ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು. ಶಾಖಾ ಉಪಾಧ್ಯಕ್ಷ ಮಜೀದ್ ಬೋಳಂಗಡಿ, ಕೋಶಾಧಿಕಾರಿ ಇಸಾಕ್ ಫೇಶನ್ ವೇರ್, ಪದಾಧಿಕಾರಿಗಳಾದ ಪಿ.ಬಿ. ಹಾಮದ್ ಹಾಜಿ, ಬಶೀರ್ ಕೆ4, ರಫೀಕ್ ಇನೋಳಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment