ಮಂಗಳೂರು ವ್ಯಾಪ್ತಿಯ ಅಂಚೆ ಕಛೇರಿಗಳಲ್ಲಿ ಆಧಾರ್ ಸಹಿತ ವಿವಿಧ ಸೇವೆಗಳ ಆರಂಭ - Karavali Times ಮಂಗಳೂರು ವ್ಯಾಪ್ತಿಯ ಅಂಚೆ ಕಛೇರಿಗಳಲ್ಲಿ ಆಧಾರ್ ಸಹಿತ ವಿವಿಧ ಸೇವೆಗಳ ಆರಂಭ - Karavali Times

728x90

25 December 2020

ಮಂಗಳೂರು ವ್ಯಾಪ್ತಿಯ ಅಂಚೆ ಕಛೇರಿಗಳಲ್ಲಿ ಆಧಾರ್ ಸಹಿತ ವಿವಿಧ ಸೇವೆಗಳ ಆರಂಭ



ಮಂಗಳೂರು, ಡಿ. 25, 2020 (ಕರಾವಳಿ ಟೈಮ್ಸ್) : ಮಂಗಳೂರಿನ 39 ಅಂಚೆ ಕಛೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಯನ್ನು ನೀಡಲಾಗುತ್ತಿದ್ದು, ಈವರೆಗೆ 23,693 ಹೊಸ ನೋಂದಣಿ ಹಾಗೂ 2,39,186 ತಿದ್ದುಪಡಿ ಸೇವೆಯ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಂಡಿರುತ್ತಾರೆ. 

ಮಂಗಳೂರು ಪ್ರಧಾನ ಅಂಚೆ ಕಛೇರಿ (ದೂರವಾಣಿ ಸಂಖ್ಯೆ 0824-2423053), ಕಂಕನಾಡಿ (ದೂರವಾಣಿ ಸಂಖ್ಯೆ 0824-2417596), ಶ್ರೀನಿವಾಸ ನಗರ (ದೂರವಾಣಿ ಸಂಖ್ಯೆ 0824-2475768), ಕುಲಶೇಖರ ಪ್ರಧಾನ ಅಂಚೆ ಕಛೇರಿ (ದೂರವಾಣಿ ಸಂಖ್ಯೆ 0824-2232186), ಕಟೀಲು (ದೂರವಾಣಿ ಸಂಖ್ಯೆ 0824-2200857), ಸುರತ್ಕಲ್ (ದೂರವಾಣಿ ಸಂಖ್ಯೆ 0824-2475786), ಐಕಳ (ದೂರವಾಣಿ ಸಂಖ್ಯೆ 0824-2295360), ಕಾಟಿಪಳ್ಳ (ದೂರವಾಣಿ ಸಂಖ್ಯೆ 0824-2270250), ಫರಂಗಿಪೇಟೆ (ದೂರವಾಣಿ ಸಂಖ್ಯೆ 08255-272330) ಅಶೋಕನಗರ (ದೂರವಾಣಿ ಸಂಖ್ಯೆ 0824-2458129), ಕಾವೂರು (ದೂರವಾಣಿ ಸಂಖ್ಯೆ 0824-2482047), ಗಂಜಿಮಠ (ದೂರವಾಣಿ ಸಂಖ್ಯೆ 0824-2255045), ಬೈಕಂಪಾಡಿ (ದೂರವಾಣಿ ಸಂಖ್ಯೆ 0824-2407235), ಕಿನ್ನಿಗೋಳಿ (ದೂರವಾಣಿ ಸಂಖ್ಯೆ 0824-2295265, ಕಿನ್ನಿಕಂಬಳ (ದೂರವಾಣಿ ಸಂಖ್ಯೆ 0824-2258203), ಬಜಪೆ (ದೂರವಾಣಿ ಸಂಖ್ಯೆ 0824-2252444), ಕೊಡಿಯಾಲ್‍ಬೈಲ್ (ದೂರವಾಣಿ ಸಂಖ್ಯೆ 0824-2444023), ಕೋಟೆಕಾರು  (ದೂರವಾಣಿ ಸಂಖ್ಯೆ 0824-2466230), ಬಲ್ಮಠ (ದೂರವಾಣಿ ಸಂಖ್ಯೆ 0824-2218861), ಕೊಂಚಾಡಿ (ದೂರವಾಣಿ ಸಂಖ್ಯೆ 0824-2211589), ಕುರ್ನಾಡು (ದೂರವಾಣಿ ಸಂಖ್ಯೆ 08255-260230), ಬೆಳ್ಮಣ್ (ದೂರವಾಣಿ ಸಂಖ್ಯೆ 8258-274230), ಕುಳಾಯಿ (ದೂರವಾಣಿ ಸಂಖ್ಯೆ 0824-2407376), ಮಂಗಳಗಂಗೋತ್ರಿ (ದೂರವಾಣಿ ಸಂಖ್ಯೆ 0824-2287282, ಬಿಜೈ (ದೂರವಾಣಿ ಸಂಖ್ಯೆ 0824-2211798), ಕೂಳೂರು (ದೂರವಾಣಿ ಸಂಖ್ಯೆ 0824-2459478), ದೇರಳಕಟ್ಟೆ (ದೂರವಾಣಿ ಸಂಖ್ಯೆ 0824-2202726), ಫಿಶರಿಸ್ ಕಾಲೇಜು (ದೂರವಾಣಿ ಸಂಖ್ಯೆ 0824-2248792), ಮರ್ಕೆರಾ ಹಿಲ್ಸ (ದೂರವಾಣಿ ಸಂಖ್ಯೆ 0824-2211684), ಪೆದಮಲೆ (ದೂರವಾಣಿ ಸಂಖ್ಯೆ 0824-2272444), ಗಾಂಧಿನಗರ (ದೂರವಾಣಿ ಸಂಖ್ಯೆ 0824-2456673), ಮೂಲ್ಕಿ (ದೂರವಾಣಿ ಸಂಖ್ಯೆ 0824-2290530), ಪೆರ್ಮನ್ನೂರು (ದೂರವಾಣಿ ಸಂಖ್ಯೆ 0824-2466390), ಹಳೆಯಂಗಡಿ (ದೂರವಾಣಿ ಸಂಖ್ಯೆ 0824-2282060), ಮುಂಡ್ಕೂರು (ದೂರವಾಣಿ ಸಂಖ್ಯೆ 08258-267257), ಉಳ್ಳಾಲ (ದೂರವಾಣಿ ಸಂಖ್ಯೆ 0824-2466240), ಹಂಪನಕಟ್ಟ (ದೂರವಾಣಿ ಸಂಖ್ಯೆ 0824-2426286), ಪಣಂಬೂರು (ದೂರವಾಣಿ ಸಂಖ್ಯೆ 0824-2407480), ವಾಮಂಜೂರು (ದೂರವಾಣಿ ಸಂಖ್ಯೆ 0824-2263448) ಅಂಚೆ ಕಛೇರಿಗಳಲ್ಲಿ ವಾರದ ಎಲ್ಲಾ ಕೆಲಸದ ದಿನಗಳಂದು ಹೊಸ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ವಿಳಾಸ ತಿದ್ದುಪಡಿ, ಕಡ್ಡಾಯ/ ಮ್ಯಾನಡೆಟರಿ ಬಯೋಮೆಟ್ರಿಕ್ ಅಪ್‍ಡೇಟ್, ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಜೋಡಣೆ/ ತಿದ್ದುಪಡಿ ಸೇವೆಯನ್ನು ನೀಡಲಾಗುತ್ತಿದೆ. 

ಹೊಸ ನೋಂದಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಕಡ್ಡಾಯ ಬಯೋಮೆಟ್ರಿಕ್ ನೋಂದಣಿಗೆ 5 ಹಾಗೂ 15 ವರ್ಷ ಪೂರ್ಣಗೊಳಿಸಿದ ಮಕ್ಕಳ ಬಯೋಮೆಟ್ರಿಕ್ ನೋಂದಣೆ ಮಾಡಿಸಲು ಯಾವುದೇ ಸೇವಾ ಶುಲ್ಕ ಇರುವುದಿಲ್ಲ. ಉಳಿದವರ ಬಯೋಮೆಟ್ರಿಕ್ ನೋಂದಣಿಗೆ ರೂ. 100/-, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ಮೊಬೈಲ್ ಸಂಖ್ಯೆ ಜೋಡಣೆ/ ತಿದ್ದುಪಡಿ, ಇಮೇಲ್ ಐಡಿ ಜೋಡಣೆ/ ತಿದ್ದುಪಡಿಗಳಿಗೆ ರೂ. 50/- ಶುಲ್ಕ ವಿಧಿಲಾಗುತ್ತಿದೆ. ಇ-ಆಧಾರ್ ಡೌನ್ ಲೋಡ್ ಮತ್ತು ಕಲರ್ ಪ್ರಿಂಟ್‍ಗೆ ರೂ. 30/- ಶುಲ್ಕ ವಿಧಿಸಲಾಗುವುದು. 

ಸಾರ್ವಜನಿಕರು ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ಪರಿಶೀಲನೆಗಾಗಿ ತರತಕ್ಕದ್ದು. ಮೇಲ್ಕಂಡ ಶುಲ್ಕದ ಹೊರತಾಗಿ ಬೇರಾವುದೇ ಶುಲ್ಕವನ್ನು ಅಂಚೆ ಕಛೇರಿಗಳಲ್ಲಿ ವಿಧಿಸಲಾಗುತಿಲ್ಲ. ಆಧಾರ್ ನೋಂದಣಿ ಹೆಸರಿನಲ್ಲಿ ಕೆಲ ಮಧ್ಯವರ್ತಿಗಳು ಕಾರ್ಯಚರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಅವರಿಂದ ದೂರವಿರಬೇಕಾಗಿ ಕೋರಲಾಗಿದೆ ಹಾಗೂ ಅಂಥವರ ವಿರುದ್ಧ ಇಲಾಖೆಗೆ ದೂರು ನೀಡಬಹುದಾಗಿದೆ.

ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ವಾರದ 7 ದಿನವೂ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೇವೆಯನ್ನು ನೀಡಲಾಗುತ್ತಿದ್ದು, ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು, ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಬೆಳಿಗ್ಗೆ 10 ರಿಂದ 5ರವರೆಗೆ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ವಿಳಾಸ ಬದಲಾವಣೆ, ಬಯೋಮೆಟ್ರಿಕ್ ಪರಿಷ್ಕರಣೆ, ಲಿಂಗ ತಿದ್ದುಪಡಿ, ಮೊಬೈಲ್/ ಇಮೇಲ್ ಪರಿಷ್ಕರಣೆ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಇಚ್ಚಿಸುವವರು ಪ್ರತಿ ಶನಿವಾರದೊಳಗೆ ತಮ್ಮ ಹೆಸರನ್ನು ಮಂಗಳೂರು ಪ್ರಧಾನ ಅಂಚೆ ಕಛೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ 0824-2423053ಗೆ ಕರೆ ಮಾಡಿ ನೋಂದಾವಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಬಹುದಾದ ಸಮಯ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ. ಮೊದಲು ನೋಂದಣಿಗೊಂಡ 50 ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಅಂಚೆ ಕಛೇರಿಯ ಈ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಂಗಳೂರು ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 


ಸಾವರಿನ್ ಗೋಲ್ದ್ ಬಾಂಡ್ ಹೂಡಿಕೆಗೆ ಡಿಸೆಂಬರ್ 28 ರಿಂದ ಜನವರಿ 1, 2021 ರವರೆಗೆ 


2020-21 ಸಾಲಿನ ಒಂಭತ್ತನೆ ಸರಣಿಯ ಸಾವರಿನ್ ಗೋಲ್ದ್ ಬಾಂಡ್ ಯೋಜನೆಯು ಇದೇ ಡಿಸೆಂಬರ್  28 ರಂದು ಪ್ರಾರಂಭಗೊಳ್ಳುವುದು. ಗ್ರಾಹಕರು ಡಿಸೆಂಬರ್  28 ರಿಂದ ಜನವರಿ 1, 2021  ರತನಕ ತಮ್ಮ ಸಮೀಪದ ಅಂಚೆ ಕಛೇರಿಯ ಮೂಲಕ ಸಾವರಿನ್ ಗೋಲ್ದ್ ಬಾಂಡ್ ನಲ್ಲಿ ಹೂಡಿಕೆ ಮಾಡಿಕೊಳ್ಳಬಹುದು.


ಸಾವರಿನ್ ಗೋಲ್ದ್ ಬಾಂಡ್ ವೈಶಿಷ್ಟ್ಯಗಳು


ಕನಿಷ್ಟ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ., ಬಾಂಡ್ ಅವಧಿ 8ವರ್ಷ. ಬಾಂಡ್ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಚಿನ್ನದ ದರದ ಮೊತ್ತವನ್ನು ನೀಡಲಾಗುವುದು., ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ದಿಯೂ ಲಭ್ಯ., 5, 6 ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿದೆ., ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹುದು., ಹೂಡಿಕೆ ಮಾಡಲು ಪಾನ್ ಕಾರ್ಡ್ ಹಾಗೂ ವಿಳಾಸದ ಪೂರಕ ದಾಖಲೆ ಇದ್ದರೆ ಸಾಕು. ಗೋಲ್ಡ್ ಬಾಂಡಿನ ದರವನ್ನು ಆರ್.ಬಿ.ಐ. ಈ ವಾರಾಂತ್ಯದಲ್ಲಿ ಪ್ರಕಟಿಸುವುದು. ಈ ಬಗ್ಗೆ ವಿವರಗಳಿಗೆ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ  0824-2218400, 9448291072 ಗೂ ಸಂಪರ್ಕಿಸಬಹುದು. 


ಅಂಚೆ ಕಛೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಸೇವೆ ಆರಂಭ 


ಗ್ರಾಮೀಣ ಭಾಗದ ಜನರು ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್‍ಪೆÇೀರ್ಟ್ ಇತ್ಯಾದಿಗಳಿಗಾಗಿ ತಮ್ಮ ವ್ಯಾಪ್ತಿಯ ಆಯ್ದ ಅಂಚೆ ಕಚೇರಿಗಳಲ್ಲಿ ಈ ಎಲ್ಲ ಸೇವೆಗಳು ಲಭ್ಯವಿವೆ. ಡಿಜಿಟಲ್ ಸೇವೆಗಳು ಜನಪ್ರಿಯವಾಗುತ್ತಿರುವ ಕಾರಣ ಕಂಪ್ಯೂಟರ್ ವ್ಯವಸ್ಥೆ ಹೊಂದಿರುವ ಅಂಚೆ ಕಚೇರಿಗಳನ್ನು ಇದೇ ಸ್ವರೂಪದಲ್ಲಿ ಜನಹಿತ ಸೇವೆಗೆ ಬಳಸಿಕೊಳ್ಳಲು ಕೇಂದ್ರ ಸರಕಾರ ಉದ್ದೇಶಿಸಿ ಕಾಮನ್ ಸರ್ವಿಸ್ ಸೆಂಟರ್‍ಗಳನ್ನು ಆಯ್ದ ಅಂಚೆ ಕಚೇರಿಗಳಲ್ಲಿ ತೆರೆದಿವೆ.

ಕಂಪ್ಯೂಟರ್ ಮತ್ತು ಇಂಟರ್ನೆಟ್ ಲಭ್ಯತೆಯು ನಗಣ್ಯ ಅಥವಾ ಹೆಚ್ಚಾಗಿ ಇಲ್ಲದಿರುವ ಗ್ರಾಮೀಣ ಮತ್ತು ದೂರದ ಸ್ಥಳಗಳಿಗೆ ಭಾರತ ಸರ್ಕಾರದ ಇ-ಸೇವೆಗಳನ್ನು ತಲುಪಿಸಲು  ಕಾಮನ್ ಸರ್ವಿಸ್ ಸೆಂಟರ್‍ಗಳು ಭೌತಿಕ ಸೌಲಭ್ಯಗಳಾಗಿವೆ. ಒಂದೇ ಭೌಗೋಳಿಕ ಸ್ಥಳದಲ್ಲಿ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸಲು ಕಾಮನ್ ಸರ್ವಿಸ್ ಸೆಂಟರ್‍ಗಳನ್ನು ಸ್ಥಾಪಿಸಲಾಗಿವೆ.

ಪಾನ್ ಕಾರ್ಡ್,  ಪಾಸ್‍ಪೆÇೀರ್ಟ್, ಚಾಲನಾ ಪರವಾನಿಗೆ (ಡಿಎಲ್), ಎಲ್‍ಎಲ್‍ಆರ್, ಸಂಧ್ಯಾ ಸುರಕ್ಷಾ, ಎಸ್‍ಸಿಎಸ್‍ಎಸ್ ಕಾರ್ಡ್, ಬಸ್, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್, ಎನ್‍ಪಿಎಸ್/ ಎಪಿವೈ/ ಜಿಎಸ್‍ಟಿ/ ಐಟಿ, ಟಿಡಿಎಸ್ ರಿಟರ್ನ್ಸ್ ಸಲ್ಲಿಕೆ, ಜೀವನ್ ಪ್ರಮಾಣ್, ವಿವಿಧ ಪ್ರಧಾನಮಂತ್ರಿ ಯೋಜನೆಗಳು, ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಜನನ/ ಮರಣ ಪ್ರಮಾಣ ಪತ್ರ, ಫಾಸ್ಟಾಗ್, ವಿಮಾ ಕಂತು ಪಾವತಿ, ಇಎಂಐ ಪಾವತಿ ಇತ್ಯಾದಿ ಸೇವೆಗಳು ಮಂಗಳೂರು ಅಂಚೆ ವಿಭಾಗದ 27 ಅಂಚೆ  ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಮುಖಾಂತರ ತೆರೆಯಲಾಗಿದ್ದು, ಕ್ರಮೇಣ ಇದನ್ನು ಉಳಿದ ಅಂಚೆ ಕಚೇರಿಗಳಿಗೂ ವಿಸ್ತರಿಸಲಾಗುವುದು. ಮಂಗಳೂರು ವ್ಯಾಪ್ತಿಯ ಮಂಗಳೂರು ಪ್ರಧಾನ ಅಂಚೆ ಕಚೇರಿ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಕೊಡಿಯಾಲ್‍ಬೈಲ್, 

ಕಂಕನಾಡಿ, ಅಶೋಕ ನಗರ, ಬಿಜೈ, ಬಲ್ಮಠ, ಸುರತ್ಕಲ್, ಮೂಲ್ಕಿ, ಬಜ್ಪೆ, ಪಣಂಬೂರು, ಕೊಂಚಾಡಿ, ಕಿನ್ನಿಗೋಳಿ, ಕಾಟಿಪಳ್ಳ, ಮಂಗಳಗಂಗೊತ್ರಿ, ಕಿನ್ನಿಕಂಬ್ಲ, ಗಂಜಿಮಠ, ಹಳೆಯಂಗಡಿ, ಬೆಳ್ಮಣ್, ಮುಂಡ್ಕೂರು, ಕಾವೂರು, ಕೂಳೂರು, ಕುಳಾಯಿ, ಪಡೀಲ್, ವಾಮಂಜೂರು, ಉಳ್ಳಾಲ ಅಂಚೆ ಕಛೇರಿಗಳಲ್ಲಿ ಕಾಮನ್ ಸರ್ವೀಸ್ ಸೆಂಟರ್ ಸೇವೆಗಳು ಲಭ್ಯವಿವೆ.

ಸಾರ್ವಜನಿಕರು ಸರಕಾರಕ್ಕೆ ಪಾವತಿಸುವ ಶುಲ್ಕದ ಜೊತೆ 100/- ರೂಪಾಯಿ ಸೇವಾ ಶುಲ್ಕ ಪಾವತಿಸಿ ಈ ಸೇವೆಗಳನ್ನು ಪಡೆದುಕೊಳ್ಳಬಹುದು. 


ಶಬರಿಮಲೆ ಸ್ವಾಮಿ ಪ್ರಸಾದ ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ


ಕೋವಿಡ್-19 ಕಾರಣದಿಂದ ಅಯ್ಯಪ್ಪ ಭಕ್ತಾದಿಗಳಿಗೆ ಹಾಗೂ ಸೇವಾರ್ಥಿಗಳಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಇರುವ ಅನಾನುಕೂಲತೆಯನ್ನು ಅರಿತು ಭಾರತೀಯ ಅಂಚೆ ಇಲಾಖೆಯು ಟ್ರವಂಕೂರ್ ದೇವಸ್ವಂ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಶಬರಿಮಲೆ ಸ್ವಾಮಿ ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಭಕ್ತಾಧಿಗಳ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯನ್ನು ಕೈಗೊಂಡಿದೆ. ಯಾವುದೇ  ಅಂಚೆ ಕಚೇರಿಯಲ್ಲಿ ರೂ. 450/- ಹಾಗೂ ತುಂಬಿಸಿದ ಅರ್ಜಿ ಫಾರ್ಮ್ ನೀಡಿದಲ್ಲಿ, ಅದನ್ನು ಇ-ಪೇಮೆಂಟ್ ಮೂಲಕ ಬುಕ್ ಮಾಡಿ, ಸ್ಪೀಡ್ ಪೋಸ್ಟ್ ಮೂಲಕ ಅಯ್ಯಪ್ಪ ಸ್ವಾಮಿಯ ಅರವಣ, ಕುಂಕುಮ, ಅರಿಶಿನ, ವಿಭೂತಿ ಮತ್ತು ಅರ್ಚನೆಯ ಪ್ರಸಾದವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಅಂಚೆ ಇಲಾಖೆಯು ಪ್ರಾರಂಭಿಸಿದೆ. ಇದರ ಪ್ರಯೋಜನವು ಗ್ರಾಮೀಣ ಅಂಚೆ ಕಛೇರಿ ವ್ಯಾಪ್ತಿಯ ಜನರಿಗೂ ತಲುಪಬೇಕೆಂಬ ಉದ್ದೇಶದಿಂದ ಎಲ್ಲಾ ಶಾಖಾ ಅಂಚೆ ಕಛೇರಿಗಳಲ್ಲಿ ಈ ಸೇವೆಯನ್ನು ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡದ ಅಂಚೆ ಕಛೇರಿಗಳಲ್ಲಿ ಈ ಸೇವೆಯನ್ನು ನವೆಂಬರ್ ತಿಂಗಳಿನಿಂದಲೇ ಪ್ರಾರಂಭಿಸಿದ್ದು, ಇವರೆಗೆ 122 ಮಂದಿ ಸೇವಾರ್ಥಿಗಳು ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ತಮ್ಮ ಮನೆಬಾಗಿಲಿನಲ್ಲಿ ಪಡೆದುಕೊಂಡಿರುತ್ತಾರೆ.

ಅಯ್ಯಪ್ಪ ಸ್ವಾಮಿಯ ಅರವಣ, ಕುಂಕುಮ, ಅರಿಶಿನ, ವಿಭೂತಿ ಮತ್ತು ಅರ್ಚನೆಯ ಪ್ರಸಾದವನ್ನು ತಮ್ಮ ಮನೆಬಾಗಿಲಿನಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಪಡೆದುಕೊಳ್ಳಲು ಇಚ್ಚಿಸುವವರು ತಮ್ಮ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಿ ನಮೂದಿತ ಅರ್ಜಿ ಫಾರ್‍ಂನೊಂದಿಗೆ ರೂ. 450/- ಪಾವತಿಸಿ ಈ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 









  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ವ್ಯಾಪ್ತಿಯ ಅಂಚೆ ಕಛೇರಿಗಳಲ್ಲಿ ಆಧಾರ್ ಸಹಿತ ವಿವಿಧ ಸೇವೆಗಳ ಆರಂಭ Rating: 5 Reviewed By: karavali Times
Scroll to Top