ಬಂಟ್ವಾಳ, ನ. 08, 2020 (ಕರಾವಳಿ ಟೈಮ್ಸ್) : ಮುಲ್ಕಿ ನಿವಾಸಿ ಯುವತಿ ಆಶಾ (36) ಎಂಬಾಕೆಯ ಶವ ಬಂಟ್ವಾಳ ತಾಲೂಕಿನ ತುಂಬೆ ನದಿ ತೀರದಲ್ಲಿ ಭಾನುವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ.
ಮುಲ್ಕಿ ಸಮೀಪದ ಒಡೆಯರಬೆಟ್ಟು ನಿವಾಸಿಯಾಗಿರುವ ಆಶಾ ಭೂಮಿ ಸಂಬಂಧಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದ್ದು, ಚಿರಪರಿಚಿತರು ಎನ್ನಲಾಗಿದೆ. ಮೃತದೇಹದ ಮೇಲೆ ರಕ್ತದ ಕಲೆಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಕೊಲೆ ಮಾಡಿ ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment