ಮಂಗಳೂರು, ನ. 14, 2020 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯಲಿ ಪೋಸ್ಟಲ್ ಅಸಿಸ್ಟೆಂಟ್/ ಸೋರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಯು, ಸಿಬ್ಬಂದಿ ನೇಮಕಾತಿ ಆಯೋಗದ ಸಿಎಚ್‍ಎಸ್‍ಎಲ್2020 ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಇದರ ಅಧಿಸೂಚನೆ ಈಗಾಗಲೇ ಆಯೋಗದ ವೆಬ್ ಸೈಟ್ https://ssc.nic.in ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2020 ಆಗಿರುತ್ತದೆ.
ಕನಿಷ್ಟ ವಿದ್ಯಾರ್ಹತೆ 10+2 (ಪಿಯುಸಿ) ಅಥವಾ 12ನೇ ತರಗತಿ. ಸದ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. (ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಪಡೆದಿರಬೇಕು.) ಆರಂಭಿಕ ವೇತನ ತಿಂಗಳಿಗೆ ರೂ. 30000+ ಇರುತ್ತದೆ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಲಭ್ಯವಿರುವ ಇತರ ಸೌಲಭ್ಯಗಳು ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಶ್ರೇಣಿ, ಮೀಸಲಾತಿ, ವಯೋಮಿತಿ, ಪರೀಕ್ಷಾ ವಿಧಾನ, ಪರೀಕ್ಷಾ ಶುಲ್ಕ ಹಾಗೂ ಇನ್ನಿತರ ಮಾಹಿತಿಗಳಿಗಾಗಿ ಇಲಾಖಾ ವೆಬ್‍ಸೈಟ್ https://ssc.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನಿರ್ವಹಿಸಬೇಕಾದ ಕೆಲಸದ ರೀತಿ ಅಥವಾ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ಸಮೀಪದ ಅಂಚೆ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ ಎಂದು ಮಂಗಳೂರು ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment