ಪರೀಕ್ಷೆ ಮುಂದೂಡಲು ಫಾರ್ಮಸಿ ವಿದ್ಯಾರ್ಥಿಗಳ ಆಗ್ರಹ - Karavali Times ಪರೀಕ್ಷೆ ಮುಂದೂಡಲು ಫಾರ್ಮಸಿ ವಿದ್ಯಾರ್ಥಿಗಳ ಆಗ್ರಹ - Karavali Times

728x90

29 November 2020

ಪರೀಕ್ಷೆ ಮುಂದೂಡಲು ಫಾರ್ಮಸಿ ವಿದ್ಯಾರ್ಥಿಗಳ ಆಗ್ರಹ



ಬೆಂಗಳೂರು, ನ. 29, 2020 (ಕರಾವಳಿ ಟೈಮ್ಸ್) : ರಾಜೀವ್ ಗಾಂಧಿ ಆರೋಗ್ಯ ವಿವಿ ಈಗಾಗಲೇ ನಿಗದಿಪಡಿಸಿರುವ ಫಾರ್ಮಸಿ ಕೋರ್ಸಿನ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಫಾರ್ಮಸಿ ಎರಡನೇ ವರ್ಷದ ಪರೀಕ್ಷೆ ಘೋಷಣೆ ಮಾಡಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾಥಿಗಳು ಆನ್ ಲೈನ್ ತರಗತಿಗಳು ನಮಗೆ ಅರ್ಥವಾಗುತ್ತಿಲ್ಲ ಎಂದು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದ್ದಾರೆ. 

ಕೋವಿಡ್ ಹಾಗೂ ಲಾಕ್‍ಡೌನ್ ಕಾರಣದಿಂದ ಭೌತಿಕ ತರಗತಿಗಳು ನಡೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆಸಲಾಗಿತ್ತು. ಈ ಆನ್‍ಲೈನ್ ತರಗತಿ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಫೇಲ್ ಆಗುವ ಸಾಧ್ಯತೆಯಿದೆ ಎಂದು ಹೇಳಿ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಮೆಡಿಕಲ್ ಕೋರ್ಸ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಹೀಗಿರುವಾಗ ಫಾರ್ಮಸಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಯಾಕೆ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ಆಫ್ ಲೈನ್ ತರಗತಿ ಮಾಡಿದ ಬಳಿಕ ಪರೀಕ್ಷೆ ನಡೆಸಿ ಎಂದು ಸಲಹೆ ನೀಡಿದ್ದಾರೆ. 

ವಿದ್ಯಾರ್ಥಿಗಳು ಪರೀಕ್ಷೆಗೆ ಬರಬೇಕಾದರೆ ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕಾಗುತ್ತದೆ. ಕೋವಿಡ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಬಳಸಲು ಭಯವಾಗುತ್ತದೆ. ಈ ಕಾರಣದಿಂದಲೂ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಪರೀಕ್ಷೆ ಮುಂದೂಡಲು ಫಾರ್ಮಸಿ ವಿದ್ಯಾರ್ಥಿಗಳ ಆಗ್ರಹ Rating: 5 Reviewed By: karavali Times
Scroll to Top