ಉಡುಪಿ, ನ. 16, 2020 (ಕರಾವಳಿ ಟೈಮ್ಸ್) : ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸೂಡಾ ಬ್ರೈಟ್ ಗ್ರೂಪ್ ಫ್ರೆಂಡ್ಸ್ ಮತ್ತು ಜನನಿ ಮಹಿಳಾ ಮಂಡಳಿಯ ವತಿಯಿಂದ 6ನೇ ವರ್ಷದ ಗೋಪೂಜಾ ಹಾಗೂ ವಾಹನ ಪೂಜಾ ಕಾರ್ಯಕ್ರಮವು ಸೂಡ ಸರಕಾರಿ ಶಾಲಾ ಆವರಣದಲ್ಲಿ ಶ್ರಿ ಶ್ರೀಶ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಸೂಡ ಗ್ರಾಮಸ್ಥರ ಗೋವು ಮತ್ತು ವಾಹನಗಳಿಗೆ ಪೂಜೆ ನೇರವೇರಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸೂಡ ಇವರು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾ ಮೋರ್ಚಾದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಜೇರಿ ಎಲ್ ಡಿ’ಸೋಜ, ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಅಚಾರ್ಯ ಸೂಡ, ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸಂಘದ ಗೌರವ ಸಲಹೆಗಾರ ಶಂಕರ್ ಜಿ. ಕುಂದರ್, ಅಧ್ಯಕ್ಷ ಪ್ರದೀಪ್ ದೇವಾಡಿಗ, ಪದಾಧಿಕಾರಿಗಳು, ಸದಸ್ಯರು, ಜನನಿ ಮಹಿಳಾ ಮಂಡಳಿ ಅಧ್ಯಕ್ಷೆ ದೀಪಿಕಾ ಅಶೋಕ್, ಪದಾಧಿಕಾರಿಗಳು, ಸದಸ್ಯರುಗಳು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment