ಬಂಟ್ವಾಳ, ನ. 07, 2020 (ಕರಾವಳಿ ಟೈಮ್ಸ್) : ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಇತ್ತೀಚೆಗೆ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಜಿ ಪಂ ಸದಸ್ಯ ಬಿ ಪದ್ಮಶೇಖರ ಜೈನ್ ಅವರ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ ಬಗ್ಗೆ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ-ಇಚಿಲ ನಿವಾಸಿ ಸದಾನಂದ ಶೆಟ್ಟಿ ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರಿಂಜ ದೇವಸ್ಥಾನದ ಆವರಣ ಗೋಡೆ ಕುಸಿತಕ್ಕು ಮಾಜಿ ಸಚಿವರು ಹಾಗೂ ಜಿ ಪಂ ಸದಸ್ಯರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಸಂದೀಪ್ ಲೋಬೋ ಹಾಗೂ ಶರಣ್ ರೈ ಬಿ ಸಿ ರೋಡು ಎಂಬವರು ಸಾಮಾಜಿಕ ಜಾಲ ತಾಣಗಳಲ್ಲಿ ಈ ಇಬ್ಬರು ನಾಯಕರ ವಿರುದ್ದ ಕಪೋಲ ಕಲ್ಪಿತ ಸುದ್ದಿಯನ್ನು ಸೃಷ್ಟಿಸಿ ಅವಮಾನ ಹಾಗೂ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿ ಘನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುವ ಸದಾನಂದ ಶೆಟ್ಟಿ ಅವರು ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
0 comments:
Post a Comment