ಬಂಟ್ವಾಳ, ನ 07, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಗಳ ಎಲ್ಲಾ ಸದಸ್ಯರ ಸಂಪೂರ್ಣ ಬೆಂಬಲ ಹಾಗೂ ಎಸ್‍ಡಿಪಿಐ ಪಕ್ಷದ ಸದಸ್ಯರ ಬೆಂಬಲದಿಂದ ಮೂರನೇ ಬಾರಿಗೆ ಪುರಸಭೆಗೆ ಆಯ್ಕೆಯಾದ ನನಗೆ ಅಧ್ಯಕ್ಷ ಹುದ್ದೆ ದೊರಕಿದೆ. ಇದರ ಹಿಂದೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ಪೂರ್ಣ ಕೃಪಾಕಟಾಕ್ಷದ ಜೊತೆಗೆ ಪಕ್ಷದ ಹಿರಿಯ-ಕಿರಿಯ ನಾಯಕರ ಹಾಗೂ ಕಾರ್ಯಕರ್ತರ ಸಹಕಾರ ಇದ್ದು ಎಲ್ಲರಿಗೂ ಚಿರಋಣಿಯಾಗಿರುವುದರ ಜೊತೆಗೆ ಮುಂದಿನ ದಿನಗಳಲ್ಲಿ ರಮಾನಾಥ ಅವರ ಅನುಭವ ಹಾಗೂ ಮಾರ್ಗದರ್ಶನದಲ್ಲಿ ಬಂಟ್ವಾಳ ಪುರಸಭೆಯಲ್ಲಿ ಅತ್ಯುತ್ತಮ ಆಡಳಿತ ನೀಡುವುದಾಗಿ ನೂತನವಾಗಿ ಆಯ್ಕೆಯಾದ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯಕರ್ತರ ಜಯಘೋಷ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮಂತ್ರಿ ರಮಾನಾಥ ರೈ ಅವರ ಕನಸಿನ ಯೋಜನೆಗಳನ್ನು ಪುರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಮೊದಲ ಆದ್ಯತೆ ನೀಡುವುದರ ಜೊತೆಗೆ ಕ್ಷೇತ್ರದ ಶಾಸಕರ, ಪುರಸಭೆಯ ಎಲ್ಲ ಸದಸ್ಯರ ಹಾಗೂ ಅಧಿಕಾರಿ-ಸಿಬ್ಬಂದಿ ವರ್ಗಗಳ ಸಹಕಾರ ಪಡೆದು ಜನತೆಗೆ ಪೂರಕವಾದ ಉತ್ತಮ ಆಡಳಿತ ನೀಡಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದರು.
0 comments:
Post a Comment