ಬಂಟ್ವಾಳ, ನ 07, 2020 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಝಾಡಿಸಿದರು.
ಬಂಟ್ವಾಳ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುಂಡ ಬಳಿಕ ಪುರಸಭಾ ಕಛೇರಿಯಿಂದ ಹೊರಬಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಎರಡೂ ಪಕ್ಷಗಳು ಪರಸ್ಪರ ಮೈತ್ರಿಯಾಗಲೀ, ಹೊಂದಾಣಿಕೆಯಾಗಲೀ, ಮಾಡುವುದಿಲ್ಲ ಎಂದು ಪುರವಾಸಿಗಳಿಗೆ ಮಾತು ಕೊಟ್ಟಿತ್ತು. ಆದರೆ ಇದೀಗ ಎರಡೂ ಪಕ್ಷಗಳು ಜನತೆಗೆ ಕೊಟ್ಟ ಮಾತಿನಿಂದ ಜಾರಿಕೊಂಡು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಿದೆ. ಆದರೂ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಉತ್ತಮ ಆಡಳಿತ ಜನತೆಗೆ ನೀಡಲಿ, ಅಭಿವೃದ್ದಿ ನಿಟ್ಟಿನಲ್ಲಿ ನಾನು ಮತ್ತು ಶಾಸಕರು ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದರು.
0 comments:
Post a Comment