ಬಂಟ್ವಾಳ, ನ 11, 2020 (ಕರಾವಳಿ ಟೈಮ್ಸ್) : ಅಕ್ರಮ ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಡಿಸಿಐಬಿ ಇನ್ಸ್‍ಪೆಕ್ಟರ್ ಚೆಲುವರಾಜು ನೇತೃತ್ವದ ಪೊಲೀಸರು ತಾಲೂಕಿನ ಮೆಲ್ಕಾರಿನಲ್ಲಿ ದಾಳಿ ನಡೆಸಿ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಎ19 ಎಂಜೆ1048 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಆರೋಪಿಗಳಾದ ಮಂಗಳೂರು ತಾಲೂಕು, ಬಂದರು ನಿವಾಸಿ ಟಿ ಪಿ ಅಝೀಝ್ ಎಂಬವರ ಪುತ್ರ ಟಿ ಪಿ ಫಾರೂಕ್ (50) ಹಾಗೂ ಮೂಲತಃ ನೇಪಾಳ ದೇಶದ ನಿವಾಸಿ, ಪ್ರಸ್ತುತ ಮಂಗಳೂರು ಪಿವಿಎಸ್ ಸರ್ಕಲ್ ಬಳಿಯ ಮಾನಸ ಟವರ್ ಎದುರುಗಡೆ ವಾಸವಾಗಿರುವ ಪ್ರೇಮ್ ಸಿಂಗ್ ಎಂಬವರ ಪುತ್ರ ಸಾಗರ್ ಸಿಂಗ್ (22) ಗಾಂಜಾವನ್ನು ಬಿ ಸಿ ರೋಡು-ಮಾಣಿ ಹೆದ್ದಾರಿಯಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೆÇಲೀಸ್ ನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಬಸ್ಸು ನಿಲ್ದಾಣದ ಬಳಿ ದಾಳಿ ನಡೆಸಿ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1.480 ಕಿ ಗ್ರಾಂ ಗಾಂಜಾ ಸಹಿತ ಮಾರುತಿ ಬ್ರೀಝಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 10,32,900/- ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಡಿಸಿಐಬಿ ಇನ್ಸ್‍ಪೆಕ್ಟರ್ ಚೆಲುವರಾಜು ಬಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ ಜಿ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ, ಶೋನ್ ಶಾ, ಸುರೇಶ್, ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ಭಾಗವಹಿಸಿದ್ದರು.
0 comments:
Post a Comment