ಮಂಗಳೂರು, ನ. 12, 2020 (ಕರಾವಳಿ ಟೈಮ್ಸ್) : ಇತ್ತೀಚೆಗೆ ರಾಜ್ಯದಲ್ಲಿ ನಡೆದ ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ನಮಗೆ ಸಂಶಯದ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ವಿಶಾಲವಾಗಿ ಚರ್ಚಿಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾವಂತರು, ಬಡವರು, ರೈತರು ಮೊದಲಾದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. ಹೀಗಿರುತ್ತಾ ಮತದಾರ ಹೇಳಿರುವುದು ತಪ್ಪಾ? ಅಥವಾ ಮತ ಬಿದ್ದಿರೋದು ತಪ್ಪಾಗಿದೆಯಾ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ತನಿಖೆ ನಡೆಸುತ್ತೇವೆ. ಪ್ರತಿ ಬೂತ್‍ಗಳಲ್ಲೂ ಒಂದೇ ರೀತಿಯ ಮತದಾನವಾಗಲು ಅದು ಗೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ನಮಗೆ ಸೋಲಾಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಈ ಸೋಲಿನ ಬಗ್ಗೆ ಅತ್ಯಂತ ಬೇಸರವಾಗಿದೆ ಎಂದ ಡಿಕೇಶಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳೊದೆಲ್ಲಾ ಸುಳ್ಳಿನ ಕಂತೆ. 10 ವರ್ಷಕ್ಕೆ ಮಾತ್ರ ಅವರು ಸೀಮಿತ ಆಗೋದು ಬೇಡಾ. 100 ವರ್ಷ ಅವರ ಪಾರ್ಟಿ ಮಾನವ ಜೀವಿ ಕೊನೆಯಾಗುವವರೆಗೂ ಅವರೇ ಅಧಿಕಾರದಲ್ಲಿರಲಿ. ನಳಿನ್ ಕುಮಾರ್ ಕಟೀಲ್‍ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಡಿಜಿ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಪತ್ ರಾಜ್‍ಗೆ ಡಿಕೆಶಿ ರಕ್ಷಣೆ ನೀಡುತ್ತಿದ್ದಾರೆ ಎಂಬ ಕಟೀಲ್ ಆರೋಪಕ್ಕೆ ಪ್ರತಿಕ್ರಯಿಸಿದ ಡಿಕೆಶಿ ನಾನು ಸಂಪತ್ ರಾಜ್ ಅವರಿಗೆ ರಕ್ಷಣೆ ಕೊಟ್ಟಿರುವ ಆರೋಪ ನಿಜವಾದರೆ ನನ್ನನ್ನು ಬಂಧಿಸಬಹುದು. ಈಗಾಗಲೇ ನನ್ನನ್ನು ಬಂಧಿಸಲಾಗಿದೆ. ಮುಂದೆಯೂ ಅರೆಸ್ಟ್ ಮಾಡುವುದಾದರೆ ಮಾಡಲಿ ಎಂದು ಆಕ್ರೋಶಭರಿತರಾಗಿ ಮಾತನಾಡಿದ ಅವರು ಬಿಜೆಪಿಗರು ನನಗೆ ಏನೇನು ತೊಂದರೆ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ, ಎಲ್ಲವನ್ನು ಕೊಡಲಿ. ಎಲ್ಲಾ ನೋಟಿಸ್ ಬರುತ್ತಿದೆ. ಇನ್ನೊಂದು ನೋಟಿಸ್ ಕೂಡಾ ನೀಡಲಿ. ನನ್ನ ಬಗ್ಗೆ ಏನೆಲ್ಲಾ ಕೇಳಲು ನಳಿನ್ ಕುಮಾರ್ ಕಟೀಲ್ ಗೃಹ ಸಚಿವರಾ ಎಂದು ಡಿಕೆಶಿ ಖಾರವಾಗಿ ಪ್ರಶ್ನಿಸಿದರು.
0 comments:
Post a Comment