ವಿಟ್ಲ, ನ. 12, 2020 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಮೇಲೆ ಕೊಲೆ ಆರೋಪ ಮಾಡಿದ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ವಿರುದ್ಧ ಕಾಂಗ್ರೆಸ್ ಮುಖಂಡರು ಗುರುವಾರ ವಿಟ್ಲ ಪೆÇಲೀಸ್ ಠಾಣೆಗೆ ದೂರು ನೀಡಿ, ಹರಿಕೃಷ್ಣ ಬಂಟ್ವಾಳ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಜಿ ಪಂ ಸದಸ್ಯ ಎಂ ಎಸ್ ಮಹಮ್ಮದ್ ಅವರು ಲಿಖಿತ ದೂರು ನೀಡಿದ್ದು, ಬಿಜೆಪಿ ಕುಟುಂಬ ಕಾರ್ಯಕ್ರಮದಲ್ಲಿ ಹರಿಕೃಷ್ಣ ಬಂಟ್ವಾಳ್ ಅವರು ರಮಾನಾಥ ರೈ ಅವರು ಶರತ್ ಮಡಿವಾಳನನ್ನು ಕೊಲೆ ಮಾಡಿದವರು ಎಂದು ಕೊಲೆಗಾರನಂತೆ ಬಿಂಬಿಸಿ ಗಂಭೀರ ಆರೋಪ ಮಾಡಿ ಕೋಮು ಸಂಘರ್ಷ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಹರಿಬಿಡಲಾಗಿತ್ತು. ಸಮಾಜದಲ್ಲಿ ಅಶಾಂತಿ ಸೃಷ್ಟಸಿ ಕೋಮು ಸಂಘರ್ಷ ಉಂಟಾಗುವಂತೆ ಪ್ರಚೋದಕಾರಿ ಭಾಷಣ ಮಾಡಿದ್ದರಿಂದ ಮಾಜಿ ಸಚಿವ ರಮಾನಾಥ ರೈ ಅವರ ಘನತೆಗೆ ಧಕ್ಕೆ ಉಂಟಾಗಿದ್ದು, ಪ್ರಾಣಭಯ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಜಿ ಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಕೊಳ್ನಾಡು ಗ್ರಾ ಪಂ ನಿಕಟಪೂರ್ವಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪ್ರಮುಖರಾದ ರಮಾನಾಥ ವಿಟ್ಲ, ಅಶ್ರಪ್ ವಿಕೆಎಂ, ಜಯಂತಿ ಪೂಜಾರಿ, ಎಲ್ಯಣ್ಣ ಪೂಜಾರಿ, ಸಂದೇಶ ಶೆಟ್ಟಿ ಬಿಕ್ನಾಜೆ, ಮಜೀದ್ ಕನ್ಯಾನ, ರಾಮಚಂದ್ರ ಪ್ರಭು, ಅಬ್ದುಲ್ ರಹಿಮಾನ್ ಕಡಂಬು, ಸಿದ್ದಿಕ್ ಸರವು, ಶರೀಫ್ ಕೊಡಂಗೆ, ಅಬೂಬಕ್ಕರ್ ಪರ್ತಿಪ್ಪಾಡಿ, ಸೋಮಶೇಖರ ತಾಳಿತ್ತನೂಜಿ, ಅಶೋಕ್ ಡಿ’ಸೋಜ, ಇಬ್ರಾಹಿಂ ಕಡಂಬು, ಪವಿತ್ರ ಪೂಂಜ, ಪ್ರಕಾಶ್ ರೈ ಎರ್ಮೆನಿಲಯ, ಹೇಮನಾಥ ಆಳ್ವ ಎರ್ಮೆನಿಲಯ ಮೊದಲಾದವರು ದೂರು ನೀಡಿದ ನಿಯೋಗದಲ್ಲಿದ್ದರು.
0 comments:
Post a Comment