ಬಿಹಾರ : ಸ್ಪಷ್ಟ ಬಹುಮತ ಪಡೆದ ಎನ್‍ಡಿಎ ಮೈತ್ರಿ - Karavali Times ಬಿಹಾರ : ಸ್ಪಷ್ಟ ಬಹುಮತ ಪಡೆದ ಎನ್‍ಡಿಎ ಮೈತ್ರಿ - Karavali Times

728x90

10 November 2020

ಬಿಹಾರ : ಸ್ಪಷ್ಟ ಬಹುಮತ ಪಡೆದ ಎನ್‍ಡಿಎ ಮೈತ್ರಿ



ಪಾಟ್ನಾ, ನ 11, 2020 (ಕರಾವಳಿ ಟೈಮ್ಸ್) : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಎನ್‍ಡಿಎ ಮೈತ್ರಿಕೂಡ ಸ್ಪಷ್ಟ ಬಹುಮತ ಪಡೆದುಕೊಂಡು ಮತ್ತೆ ಅಧಿಕಾರಕೇರಿದೆ. 

ಬಿಹಾರ ಚುನಾವಣೆ ಫಲಿತಾಂಶದಲ್ಲಿ ಬೆಳಗ್ಗಿನಿಂದ ಹಾವು ಏಣಿ ಆಟ ಶುರುವಾಗಿತ್ತು. ಆರಂಭದಿಂದ ಮಹಾ ಘಟಬಂಧನ್ ವಿರುದ್ಧ ಎನ್‍ಡಿಎ ಮುನ್ನಡೆ ಸಾಧಿಸಿದ್ದರೂ, ಸರಳ ಬಹುಮತದಿಂದ ಕುಸಿಯುತ್ತಿತ್ತು. ಅಂತಿಮವಾಗಿ ಎನ್‍ಡಿಎ 125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 

ಇನ್ನು ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಆರ್‍ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆರ್‍ಜೆಡಿ  75 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಚುನಾವಣೆಗಿಂತ ಇದು ಕಡಿಮೆಯಾಗಿದೆ. ಕಳೆದ ಚುನಾವಣೆಯಲ್ಲಿ ಆರ್‍ಜೆಡಿ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಫಲಿತಾಂಶದ ಆರಂಭದಲ್ಲಿ 80 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಂತಿಮವಾಗಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನು ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಕ್ಕೆ ಕುಸಿದಿದೆ. ಕಳೆದ ಬಾರಿ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಇಂದು 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.









  • Blogger Comments
  • Facebook Comments

0 comments:

Post a Comment

Item Reviewed: ಬಿಹಾರ : ಸ್ಪಷ್ಟ ಬಹುಮತ ಪಡೆದ ಎನ್‍ಡಿಎ ಮೈತ್ರಿ Rating: 5 Reviewed By: karavali Times
Scroll to Top