ಬಂಟ್ವಾಳ, ನ. 08, 2020 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿಂದ ವ್ಯಕ್ತಿಯೋರ್ವರು ಭಾನುವಾರ ಬೆಳಿಗ್ಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೇತುವೆ ಮೇಲೆ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿ ಬ್ಯಾಗನ್ನು ಸೇತುವೆ ಮೇಲಿಟ್ಟು ನದಿಗೆ ಧುಮುಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೂಡಿನಬಳಿ ಪರಿಸರದ ಈಜುಪಟು ಯುವಕರು ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದು, ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಕೂಡಾ ಸ್ಥಳಕ್ಕಾಗಮಿಸಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ. ಸೇತುವೆ ಮೇಲೆ ದೊರೆತ ಬ್ಯಾಗಿನಲ್ಲಿದ್ದ ದಾಖಲೆಗಳ ಪ್ರಕಾರ ಪುತ್ತೂರು ಮೂಲಕ ವ್ಯಕ್ತಿ ಎನ್ನಲಾಗಿದೆ.
0 comments:
Post a Comment