ಸಿಡ್ನಿ, ನ. 29, 2020 (ಕರಾವಳಿ ಟೈಮ್ಸ್) : ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ-ಭಾರತ ನಡುವಿನ ಏಕದಿನ ಸರಣಿಯಲ್ಲಿ ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲೂ ಭಾರತವನ್ನು 51 ರನ್‍ಗಳಿಂದ ಪರಾಭವಗೊಳಿಸಿದ ಆಸ್ಟ್ರೇಲಿಯಾ ತಂಡ ಸತತ ಎರಡು ಜಯದ ಮೂಲಕ ಒಂದು ಪಂದ್ಯ ಬಾಕಿಯಿರುತ್ತಲೇ ಸರಣಿ ಕೈವಶಪಡಿಸಿಕೊಂಡಿದೆ.
ಆಸೀಸ್ ನಿಗದಿಪಡಿಸಿದ 390 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತದ ದಾಂಡಿಗರು ಹೋರಾಟ ನಡೆಸಿದರಾದರೂ ಗೆಲುವಿನ ಸಮೀಪ ಬರುವಲ್ಲಿ ವಿಫಲರಾದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ನಾಯಕನ ನಿರೀಕ್ಷೆಯನ್ನು ಹುಸಿ ಮಾಡದ ಎಲ್ಲ ದಾಂಡಿಗರು ಉತ್ತಮ ಆಟ ಆಡುವ ಮೂಲಕ ನಿಗದಿತ 50 ಓವರ್‍ಗಳಲ್ಲಿ ಆಸ್ಟ್ರೇಲಿಯಾ 389 ರನ್ ಕಲೆ ಹಾಕಿತ್ತು.
ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಝಲ್‍ವುಡ್ ಅವರ ನಿಖರವಾದ ದಾಳಿಗೆ ಶಿಖರ್ ಧವನ್ (30) ಹಾಗೂ ಮಯಾಂಕ್ ಅಗರ್‍ವಾಲ್ (28) ನಿರುತ್ತರರಾದರು. ಕೆಎಲ್ ರಾಹುಲ್-ಕೊಹ್ಲಿ (89) ಅವರ 93 ರನ್ ಗಳ ಜೊತೆಯಾಟದಿಂದ ಕೊಂಚ ಹೋರಾಟದ ಸುಳಿವು ಮೂಡಿತ್ತಾದರೂ ಇದು ಹೆಚ್ಚು ಹೊತ್ತು ಉಳಿಯಲಿಲ್ಲ. ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಸತತ ಎರಡನೇ ಬಾರಿಗೂ ಶತಕ ಸಿಡಿಸಿ ಮಿಂಚಿದರು. 64 ಎಸೆತಗಳಲ್ಲಿ 104 ರನ್‍ಗಳನ್ನು ಭಾರಿಸಿದ ಸ್ಮಿತ್ ತಂಡ ಬೃಹತ್ ಮೊತ್ತ ಗಳಿಸಲು ಕಾರಣರಾದರು. ಸ್ಮಿತ್ ಜೊತೆಗೆ ಡೇವಿಡ್ ವಾರ್ನರ್ (77 ಎಸೆತಗಳಲ್ಲಿ 83 ರನ್) ಗ್ಲೆನ್ ಮಾಕ್ಸ್‍ವೆಲ್ (29 ಎಸೆತಗಳಲ್ಲಿ 63 ರನ್) ಗಳಿಸಿ ತಂಡಕ್ಕೆ ನೆರವಾದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ 59ನೇ ಅರ್ಧ ಶತಕ ದಾಖಲಿಸಿದರೆ, ಕೆ.ಎಲ್. ರಾಹುಲ್ 8ನೇ ಅರ್ಧಶತಕ ದಾಖಲಿಸಿ ಮಿಂಚಿದರು. ಆದರೆ ಭಾರತ ಹೊರ ದೇಶದಲ್ಲಿ ಸತತ ಎರಡನೇ ಬಾರಿ ಏಕದಿನ ಸರಣಿ ಕಳಕೊಂಡ ಕುಖ್ಯಾತಿಗೆ ಪಾತ್ರವಾಯಿತು. ಕಳೆದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ 3-0 ಅಂತರದಲ್ಲಿ ಗೆಲುವು ದಾಖಲಿಸಿತ್ತು. ಇದೀಗ ಆಸ್ಟ್ರೇಲಿಯಾ ಮೂರು ಪಂದ್ಯಗಳಲ್ಲಿ 1 ಪಂದ್ಯ ಬಾಕಿ ಇರುತ್ತಲೇ ಸರಣಿ ಗೆದ್ದು ಭಾರತಕ್ಕೆ ಸೋಲಿನ ರುಚಿ ತೋರಿದೆ.
ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯಾ
ಸ್ಮಿತ್ 104 ರನ್ (64 ಎಸೆತ, 14 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 83 ರನ್ (77 ಎಸೆತ, 7 ಬೌಂಡರಿ, 3 ಸಿಕ್ಸರ್) ಲಬುಶೇನ್ 70 ರನ್ (61 ಎಸೆತ, 5 ಬೌಂಡರಿ) ಗ್ಲೆನ್ ಮ್ಯಾಕ್ಸ್‍ವೆಲ್ 63 ರನ್ (29 ಎಸೆತ, 4 ಬೌಂಡರಿ, 4 ಸಿಕ್ಸರ್), ನಾಯಕ ಫಿಂಚ್ 60 ರನ್ (69 ಎಸೆತ, 6 ಬೌಂಡರಿ, 1 ಸಿಕ್ಸರ್)
ಟೀಂ ಇಂಡಿಯಾ ಪರ ಸೈನಿ 7 ಓವರ್‍ಗಳಲ್ಲಿ 70 ರನ್ ಬಿಟ್ಟುಕೊಟ್ಟರೆ, ಬುಮ್ರಾ 10 ಓವರ್‍ಗಳಲ್ಲಿ 79 ರನ್, ಶಮಿ 73 ರನ್ ಬಿಟ್ಟುಕೊಟ್ಟರು. ಚಹಲ್ 9 ಓವರ್‍ಗಳಲ್ಲಿ 71 ರನ್ ನೀಡಿದರು.
ಭಾರತ
ಶಿಖರ್ ಧವನ್ 30 (5 ಬೌಂಡರಿ), ಮಾಯಾಂಕ್ ಅಗರ್ವಾಲ್ 28 ರನ್ (4 ಬೌಂಡರಿ), ನಾಯಕ ವಿರಾಟ್ ಕೊಹ್ಲಿ 89 ರನ್ (7 ಬೌಂಡರಿ, 2 ಸಿಕ್ಸ್), ಶ್ರೇಯಸ್ ಅಯ್ಯರ್ 38 ರನ್ (5 ಬೌಂಡರಿ), ವಿಕೆಟ್ ಕೀಪರ್ ಕೆ ಎಲ್ ರಾಹುಲ್ 76 ರನ್ (4 ಬೌಂಡರಿ, 5 ಸಿಕ್ಸ್), ಹಾರ್ದಿಕ್ ಪಾಂಡ್ಯ 28 ರನ್ (1 ಬೌಂಡರಿ 1 ಸಿಕ್ಸ್), ರವೀಂದ್ರ ಜಡೇಜಾ 24 ರನ್ (1 ಬೌಂಡರಿ 2 ಸಿಕ್ಸ್), ನವದೀಪ್ ಸೈನಿ 10 ರನ್ (1 ಬೌಂಡರಿ), ಮೊಹಮ್ಮದ್ ಶಮಿ 1 ರನ್, ಜಸ್‍ಪ್ರೀತ್ ಬುಮ್ರಾ 0, ಯುಜ್ವೇಂದ್ರ ಚಹಲ್ 4 ರನ್ ಗಳಿಸಿದರು.
0 comments:
Post a Comment