ಬಂಟ್ವಾಳ, ಅಕ್ಟೋಬರ್ 2, 2020 (ಕರಾವಳಿ ಟೈಮ್ಸ್) : ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಬಗ್ಗೆ ಹಿಂದು ನಾವೆಲ್ಲ ಒಂದು ಎನ್ನುವ ಸಂಘಪರಿವಾರ ಯಾಕೆ ಮೌನವಾಗಿದೆ, ಶೋಭಾ ಕರಂದ್ಲಾಜೆ, ಸ್ಮøತಿ ಇರಾನಿ ಈಗ ಎಲ್ಲಿದ್ದಾರೆ ಎಂದು ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಪ್ರಶ್ನಿಸಿದರು.
ಉತ್ತರ ಪ್ರದೇಶ ಹತ್ರಾಸ್ ಎಂಬಲ್ಲಿ ದಲಿತ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರನ್ನು ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸರಕಾರ ರಕ್ಷಣೆ ಮಾಡುತ್ತಿದೆ ಮಾತ್ರವಲ್ಲ ದಲಿತ ಹೆಣ್ಣು ಮಗುವಿನ ಶವವನ್ನು ಕೂಡ ಕುಟುಂಬಸ್ಥರಿಗೆ ಬಿಟ್ಟುಕೊಡದೆ ಪೆÇೀಲೀಸರನ್ನು ಛೂ ಬಿಟ್ಟು ಗೂಂಡಗಿರಿ ನಡೆಸುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಡಿ ವೈ ಎಫ್ ಐ ಶುಕ್ರವಾರ ಸಂಜೆ ಬಿ ಸಿ ರೋಡಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಲಿತ ಮುಖಂಡರಾದ ಭಾನುಚಂದ್ರ ಕೃಷ್ಣಾಪುರ ಮಾತನಾಡಿ ಉತ್ತರ ಪ್ರದೇಶದಲ್ಲಿರುವುದು ರಾಮ ರಾಜ್ಯ ಅಲ್ಲ, ಬದಲಾಗಿ ಅದು ಗೂಂಡಾ ರಾಜ್ಯ. ಸಂವಿಧಾನವನ್ನು ನಾಶ ಮಾಡಿ ಮನುವಾದಿಗಳು ಆಡಳಿತ ನಡೆಸುತ್ತಿದ್ದು ಮನುವಾದಿಗಳ ಆಡಳಿತದಲ್ಲಿ ದಲಿತರಿಗೆ ನ್ಯಾಯ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
ಡಿವೈಎಫ್‍ಐ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಜೆಡಿಎಸ್ ಮುಖಂಡ ಹಾರೂನ್ ರಶೀದ್, ದಲಿತ ಮುಖಂಡ ರಾಜಾ ಪಲ್ಲಮಜಲು, ಪ್ರಜಾಪರಿವರ್ತನ ವೇದಿಕೆಯ ಮುಖಂಡರಾದ ಬಿ ಟಿ ಕುಮಾರ್, ಸತೀಶ್ ಅರಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ತುಳಸೀದಾಸ್ ವಿಟ್ಲ, ಜನಾರ್ದನ ಕೆಸರಗದ್ದೆ, ಸುರೇಂದ್ರ ಕೋಟ್ಯಾನ್, ರಿಯಾಝ್ ಬಂಟ್ವಾಳ, ಮಹಮ್ಮದ್ ಗಝಾಲಿ, ರಾಜಾ ಚೆಂಡ್ತಿಮಾರ್, ಕೃಷ್ಣಪ್ಪ ಪುದ್ದೊಟ್ಟು, ಮಹಮ್ಮದಾಲಿ ಮದಕ, ಅಲ್ತಾಪ್ ತುಂಬೆ, ಖಲೀಲ್ ಬಾಪು, ವೆಲೇರಿಯಾ, ತ್ರಿಶೀಲಾ, ಉಮೇಶ್ ವಾಮದಪದವು, ಪುನೀತ್ ರಾಜ್, ಪ್ರೀತಂ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment