ಮಂಗಳೂರು, ಅ. 07, 2020 (ಕರಾವಳಿ ಟೈಮ್ಸ್) : ನಗರದ ಹೊರವಲಯದ ಬಿಕರ್ನಕಟ್ಟೆಯಲ್ಲಿ ಮೀನು ಸಾಗಾಟದ ಅಟೋ ರಿಕ್ಷಾ ಮಂಗಳವಾರ ಮುಂಜಾನೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ವಳಚ್ಚಿಲ್ ನಿವಾಸಿ ಸಲೀಂ ಎಂಬವರು ಮೃತಪಟ್ಟಿದ್ದು, ಶಿಹಾಬ್ ಹಾಗೂ ನಿಝಾಮುದ್ದೀನ್ ಎಂಬವರು ಗಾಯಗೊಂಡಿದ್ದಾರೆ.
ಮಲ್ಪೆಯಿಂದ ಅಟೋ ರಿಕ್ಷಾದಲ್ಲಿ ಹಸಿ ಮೀನು ಹೇರಿಕೊಂಡು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಮೀರಿ ಬಿಕರ್ನಕಟ್ಟೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ಸಲೀಂ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
0 comments:
Post a Comment