ಕೊರೋನಾ ಇದೆ, ದುಡ್ಡಿಲ್ಲ ಎಂದು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಿ : ಸರಕಾರದ ವಿರುದ್ದ ಸಿದ್ದು ಗುಡುಗು - Karavali Times ಕೊರೋನಾ ಇದೆ, ದುಡ್ಡಿಲ್ಲ ಎಂದು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಿ : ಸರಕಾರದ ವಿರುದ್ದ ಸಿದ್ದು ಗುಡುಗು - Karavali Times

728x90

17 October 2020

ಕೊರೋನಾ ಇದೆ, ದುಡ್ಡಿಲ್ಲ ಎಂದು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಿ : ಸರಕಾರದ ವಿರುದ್ದ ಸಿದ್ದು ಗುಡುಗು

ಹಸಿದವರಿಗೆ ಅನ್ನ ಹಾಕಲು ಆಗದ ಸರಕಾರ ಇದ್ದರೆಷ್ಟು, ಹೋದರೆಷ್ಟು?

ಬೆಂಗಳೂರು, ಅ. 17, 2020 (ಕರಾವಳಿ ಟೈಮ್ಸ್) : ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ನಾನು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಜೆಪಿ ಸರಕಾರ ಹೊರಟಿದೆ. ದುಡ್ಡಿಲ್ಲ, ಕೊರೋನಾ ಇದೆ ಅಂತ ಜನರ ಎದುರು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗದ ಸರಕಾರ ಇದ್ದರೆಷ್ಟು, ಹೋದರೆಷ್ಟು? ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಗುಡುಗಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕುಸುಮಾ ನಾಮಪತ್ರ ಸಲ್ಲಿಸುವ ದಿನ ನಾನು 11.45ಕ್ಕೆ ನಾಮಪತ್ರ ಸ್ವೀಕರಿಸುವ ಕಛೇರಿಗೆ ಹೋಗಿದ್ದು, ನನ್ನ ವಿರುದ್ಧ 11.15ಕ್ಕೆ ಕೇಸ್ ದಾಖಲಿಸಲಾಗಿದೆ. ಇದು ಪೆÇಲೀಸ್ ಇಲಾಖೆಯ ದುರ್ಬಳಕೆಯಲ್ಲದೆ ಇನ್ನೇನು? ಎಂದು ಪ್ರಶ್ನಿಸಿದ್ದಾರೆ. ಇದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದ ಆರೋಪ. ಇಂಥಾ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರಲ್ಲ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೋವಿಡ್ ನಿಯಮಗಳಿಗೆ ವಿರುದ್ಧವಲ್ಲವೇ? ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ, ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಆರೋಗ್ಯ ಸಚಿವರು ಆಗಾಗ ತಮ್ಮ ಪಕ್ಷದ ಸಭೆ ಸಮಾರಂಭಗಳನ್ನೂ ಗಮನಿಸಲಿ ಎಂದು ಸಲಹೆ ನೀಡಿದ್ದಾರೆ.

  • Blogger Comments
  • Facebook Comments

2 comments:

  1. OCTOBER 13, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ಝೋನ್ ಅಧೀನದ ದಮ್ಮಾಂ ಘಟಕದ ವತಿಯಿಂದ DKSC DAY ಅಕ್ಟೋಬರ್ 15 ಗುರುವಾರ ಕೇಂದ್ರ, ವಲಯ ಹಾಗೂ ಘಟಕಗಳ ನೇತಾರರ ಸಮಕ್ಷಮದಲ್ಲಿ ಆಚರಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಡಿಕೆಯಸ್ಸಿ ದಮ್ಮಾಂ ಘಟಕದ ಅಧ್ಯಕ್ಷ ಹನೀಫ್ ತಡಂಬೈಲ್ ವಹಿಸಿದ್ದರು.
    ಅಲ್ತಾಫ್ ಚೊಕ್ಕಬೆಟ್ಟು ಖಿರಾಅತ್ ಪಠಿಸಿದರು.
    ಸ್ಥಾಪಕ ಸದಸ್ಯ ಅಬ್ದುಲ್ ಅಝೀಝ್ ಮೂಡುತೋಟ ಡಿಕೆಯಸ್ಸಿ ನಡೆದುಕೊಂಡು ಬಂದ ಹಾದಿಯನ್ನು ವಿವರಿಸಿದರು. ದಮ್ಮಾಂ ಝೋನ್ ಅಧ್ಯಕ್ಷರಾದ ಹಸನ್ ಬಾವ ಕುಪ್ಪೆ ಪದವು ಹಾಗೂ ಅಬೂಬಕ್ಕರ್ ಅಜಿಲಮೊಗರು ಸಂದರ್ಭೋಚಿತವಾಗಿ ಮಾತನಾಡಿದರು.
    ಸ್ಥಾಪಕ ಸದಸ್ಯರೂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆದ ಮುಹಮ್ಮದ್ ಹಸನ್ ಮೂಡುತೋಟ, ದಮ್ಮಾಂ ಝೋನ್ ಪ್ರಪ್ರಥಮ ಅಧ್ಯಕ್ಷ ರೂ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರೂ ಆದ ಹಾತಿಂ ಕಂಚಿ ಮತ್ತು ಪ್ರಪ್ರಥಮ ದಮ್ಮಾಂ ಘಟಕದ ಅಧ್ಯಕ್ಷರಾದ ಸಿದ್ದೀಖ್ ಕೊಂಚಾರ್ ರವರನ್ನು ಸವಿನೆನಪಿಗಾಗಿ ಸನ್ಮಾನಿಸಲಾಯಿತು.
    ಸಿಲ್ವರ್ ಜುಬಿಲಿ ನೋಂದಾವಣಿಯ
    ಪ್ರವೇಶ ಪತ್ರ ಹಾಗೂ ಇಸ್ಮಾಯೀಲ್ ಕಾಟಿಪಳ್ಳ ರಚಿಸಿದ ಡಿಕೆಯಸ್ಸಿ ಡೇ ಲೇಖನವನ್ನು ಬಿಡುಗಡೆ ಗೊಳಿಸಲಾಯಿತು.
    ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕೂಳೂರು ಧನ್ಯವಾದಗೈದರು.
    ಪ್ರಾರಂಭದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

    ReplyDelete
  2. OCTOBER 13, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ಝೋನ್ ಅಧೀನದ ದಮ್ಮಾಂ ಘಟಕದ ವತಿಯಿಂದ DKSC DAY ಅಕ್ಟೋಬರ್ 15 ಗುರುವಾರ ಕೇಂದ್ರ, ವಲಯ ಹಾಗೂ ಘಟಕಗಳ ನೇತಾರರ ಸಮಕ್ಷಮದಲ್ಲಿ ಆಚರಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಡಿಕೆಯಸ್ಸಿ ದಮ್ಮಾಂ ಘಟಕದ ಅಧ್ಯಕ್ಷ ಹನೀಫ್ ತಡಂಬೈಲ್ ವಹಿಸಿದ್ದರು.
    ಅಲ್ತಾಫ್ ಚೊಕ್ಕಬೆಟ್ಟು ಖಿರಾಅತ್ ಪಠಿಸಿದರು.
    ಸ್ಥಾಪಕ ಸದಸ್ಯ ಅಬ್ದುಲ್ ಅಝೀಝ್ ಮೂಡುತೋಟ ಡಿಕೆಯಸ್ಸಿ ನಡೆದುಕೊಂಡು ಬಂದ ಹಾದಿಯನ್ನು ವಿವರಿಸಿದರು. ದಮ್ಮಾಂ ಝೋನ್ ಅಧ್ಯಕ್ಷರಾದ ಹಸನ್ ಬಾವ ಕುಪ್ಪೆ ಪದವು ಹಾಗೂ ಅಬೂಬಕ್ಕರ್ ಅಜಿಲಮೊಗರು ಸಂದರ್ಭೋಚಿತವಾಗಿ ಮಾತನಾಡಿದರು.
    ಸ್ಥಾಪಕ ಸದಸ್ಯರೂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆದ ಮುಹಮ್ಮದ್ ಹಸನ್ ಮೂಡುತೋಟ, ದಮ್ಮಾಂ ಝೋನ್ ಪ್ರಪ್ರಥಮ ಅಧ್ಯಕ್ಷ ರೂ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರೂ ಆದ ಹಾತಿಂ ಕಂಚಿ ಮತ್ತು ಪ್ರಪ್ರಥಮ ದಮ್ಮಾಂ ಘಟಕದ ಅಧ್ಯಕ್ಷರಾದ ಸಿದ್ದೀಖ್ ಕೊಂಚಾರ್ ರವರನ್ನು ಸವಿನೆನಪಿಗಾಗಿ ಸನ್ಮಾನಿಸಲಾಯಿತು.
    ಸಿಲ್ವರ್ ಜುಬಿಲಿ ನೋಂದಾವಣಿಯ
    ಪ್ರವೇಶ ಪತ್ರ ಹಾಗೂ ಇಸ್ಮಾಯೀಲ್ ಕಾಟಿಪಳ್ಳ ರಚಿಸಿದ ಡಿಕೆಯಸ್ಸಿ ಡೇ ಲೇಖನವನ್ನು ಬಿಡುಗಡೆ ಗೊಳಿಸಲಾಯಿತು.
    ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕೂಳೂರು ಧನ್ಯವಾದಗೈದರು.
    ಪ್ರಾರಂಭದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

    ReplyDelete

Item Reviewed: ಕೊರೋನಾ ಇದೆ, ದುಡ್ಡಿಲ್ಲ ಎಂದು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಿ : ಸರಕಾರದ ವಿರುದ್ದ ಸಿದ್ದು ಗುಡುಗು Rating: 5 Reviewed By: karavali Times
Scroll to Top