ಬಂಟ್ವಾಳ, ಅಕ್ಟೋಬರ್ 14, 2020 (ಕರಾವಳಿ ಟೈಮ್ಸ್) : ತಾಲೂಕಿನ ಸಿದ್ದಕಟ್ಟೆ-ಮೂಡಬಿದ್ರೆ ರಸ್ತೆಯಲ್ಲಿ ಅಪಘಾತ ತಪ್ಪಿಸಲು ಯತ್ನಿಸಿದ ವೇಳೆ ಚಾಲಕನ ನಿಯಂತ್ರಣ ಮೀರಿದ ಪಿಕಪ್ ವಾಹನವೊಂದು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದೆ.
ಮೂಡಬಿದ್ರೆಯಿಂದ ಸಿದ್ದಕಟ್ಟೆ ಕಡೆಗೆ ಬರುತ್ತಿದ್ದ ಜನರೇಟರ್ ಹೇರಿಕೊಂಡು ಬಂದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತರಕಾರಿ ಸಾಗಾಟದ ಪಿಕಪ್ ಚಾಲಕನ ನಿಯಂತ್ರಣ ಮೀರಿ ಈ ಅವಘಡ ಸಂಭವಿಸಿದೆ. ಸುರಿಯುತ್ತಿದ್ದ ಮಳೆಯೂ ಈ ಅಪಘಾತ ಸಂಭವಿಸಲು ಕಾರಣ ಎನ್ನಲಾಗಿದೆ. ಘಟನೆಯಿಂದ ಚಾಲಕನಿಗಾಗಲೀ, ಪ್ರಯಾಣಿಕರಿಗಾಗಲೀ ಯಾವುದೇ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಕ್ರೇನ್ ಬಳಸಿ ವಾಹನವನ್ನು ಮೇಲಕ್ಕೆತ್ತಲಾಯಿತು.
0 comments:
Post a Comment