ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಗದ ಮರಳು : ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ - Karavali Times ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಗದ ಮರಳು : ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ - Karavali Times

728x90

13 October 2020

ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಗದ ಮರಳು : ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ

 



ಮಂಗಳೂರು, ಅ 13, 2020 (ಕರಾವಳಿ ಟೈಮ್ಸ್) : ಕಟ್ಟಡ ನಿರ್ಮಾಣ ಮಾಡುವವರಿಗೆ ಮರಳು ಸಿಗದೇ ಇರುವ ಕಾರಣ ಹರೇಕಳ, ಪಾವೂರು ಗ್ರಾಮದಲ್ಲಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು ಇದರಿಂದ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ಕಡಿಮೆ ದರದಲ್ಲಿ ಸುಲಭವಾಗಿ ಮನೆ ಕಟ್ಟುವವರಿಗೆ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮ ಚಾವಡಿ ಜಂಕ್ಷನ್ನಿನಲ್ಲಿ ಸಿಡಬ್ಲ್ಯುಎಫ್‍ಐ ಹಾಗೂ ಡಿವೈಎಫ್‍ಐ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ ನಡೆಯಿತು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡು ಅವರು, ಲಾಕ್‍ಡೌನ್ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದು, ಕಾರ್ಮಿಕರು ಕೆಲಸವಿಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಈಗ ಲಾಕ್‍ಡೌನ್ ತೆರವುಗೊಂಡು ಜನ ಜೀವನ ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿದ್ದರೂ ಕಟ್ಟಡ ಕಾರ್ಮಿಕರು ಮಾತ್ರ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಮರಳು ಸಮರ್ಪಕವಾಗಿ ಸಿಗದಿರುವ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದ್ದು ಜಿಲ್ಲಾಡಳಿತ ಸ್ವಯಂ ಮುತುವರ್ಜಿ ವಹಿಸಿ ಕಟ್ಟಡ ನಿರ್ಮಾಣ ಮಾಡುವವರಿಗೆ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಮರಳು ಸಿಗುವಂತಾಗಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯ ಕಾರ್ಯದರ್ಶಿ ಚಂದ್ರಹಾಸ ಪಿಲಾರ್, ಡಿವೈಎಫ್‍ಐ ಜಿಲ್ಲಾ ನಾಯಕ ರಫೀಕ್ ಹರೇಕಳ, ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯಾಧ್ಯಕ್ಷ ಜನಾರ್ದನ್ ಕುತ್ತಾರ್, ಉಪಾಧ್ಯಕ್ಷ ರಾಮಚಂದ್ರ ಫಜೀರ್, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಉಪಾಧ್ಯಕ್ಷ ಸತ್ತಾರ್ ಕೊಜಪಾಡಿ, ಉಮರಬ್ಬ ನ್ಯೂಪಡ್ಪು, ಕಾರ್ಯದರ್ಶಿ ಹನೀಫ್ ಪೆÇಡಾರ್, ಎವರಿಸ್ ಕುಟಿನ್ಹಾ, ಇಬ್ರಾಹಿಂ ಕೊಜಪಾಡಿ, ಡಿವೈಎಫ್‍ಐ ಅಧ್ಯಕ್ಷ ನಿಝಾಂ ಹರೇಕಳ, ಅಶ್ರಫ್ ಹರೇಕಳ, ಇಸ್ಮಾಯಿಲ್ ಕೊಜಪಾಡಿ, ನವಾಝ್ ಆಲಡ್ಕ  ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಗದ ಮರಳು : ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ Rating: 5 Reviewed By: karavali Times
Scroll to Top