ಮಂಗಳೂರು, ಅ. 11, 2020 (ಕರಾವಳಿ ಟೈಮ್ಸ್) : ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದ ಅಕ್ರಮ ಜಾನುವಾರು ಸಾಗಾಟಗಾರರ ಕೃತ್ಯಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದ ಘಟನೆ ಮೂಡಬಿದ್ರೆ ಸಮೀಪದ ಮೂಡುಕೊಣಾಜೆ ಎಂಬಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಭಾನುವಾರ ಬೆಳಗಿನ ಜಾವ ಮೂಡುಬಿದ್ರೆಯ ಶಿರ್ತಾಡಿಯಿಂದ 6 ಗೋವುಗಳನ್ನು ರಿಟ್ಸ್ ಕಾರಿನಲ್ಲಿ ಅಕ್ರಮವಾಗಿ ಹೇರಿಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಹಿತಿ ಪಡೆದ ಮೂಡಬಿದ್ರೆ ಪೆÇಲೀಸರು ಕಾರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭ ಮೂಡಬಿದ್ರೆ ಠಾಣಾಧಿಕಾರಿ ಬಿ.ಎಸ್. ದಿನೇಶ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಗುಂಡಿನ ಶಬ್ದ ಕೇಳಿ ಬೆÀದರಿದ ಆರೋಪಿಗಳು ಕಾರು ಹಾಗೂ ಜಾನುವಾರುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಾರು ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡ ಪೆÇಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಮೂಡಬಿದ್ರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment