ವಿಟ್ಲ, ಅಕ್ಟೋಬರ್ 12, 2020 (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಮೇಗಿನಪೇಟೆ-ಪೆÇನ್ನೊಟ್ಟು ಪ್ರದೇಶದಲ್ಲಿ ಖಾಸಗಿ ಜಾಗದಲ್ಲಿ ಹಾದುಹೋಗುತ್ತಿರುವ ಅಪಾಯಕಾರಿ ವಿದ್ಯುತ್ ತಂತಿಯು ಕಳೆದ ಆರು ತಿಂಗಳಿನಲ್ಲಿ ಹಲವು ಬಾರಿ ಕಡಿದು ಬಿದ್ದು ಪ್ರದೇಶದ ಜನರಿಗೆ ಅಪಾಯದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಹಳೆಯ ತಂತಿಯನ್ನು ತೆಗೆದು ಹೊಸ ತಂತಿ ಜೋಡಿಸಲು ವಿಟ್ಲ ಮೆಸ್ಕಾಂ ಶಾಖಾಧಿಕಾರಿಗೆ ಡಿ.ವೈ.ಎಫ್.ಐ ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಉದ್ಯಮಿ ಜಿ ಎಸ್ ಹಮೀದ್, ಡಿವೈಎಫ್‍ಐ ಮುಖಂಡರಾದ ಇಕ್ಬಾಲ್ ಹಳೆಮನೆ, ನುಜುಮ್ ಅಳಿಕೆ ಉಪಸ್ಥಿತರಿದ್ದರು. ನಿಯೋಗದ ಮನವಿಗೆ ಸ್ಪಂದಿಸಿದ ಮೆಸ್ಕಾಂ ಶಾಖಾಧಿಕಾರಿ ಅತ್ಯಂತ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
0 comments:
Post a Comment