ಮಂಗಳೂರು, ಅ. 28, 2020 (ಕರಾವಳಿ ಟೈಮ್ಸ್) : ನಗರದ ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಮಂಗಳವಾರ ರಾತ್ರಿ ಯಮರೂಪದಲ್ಲಿ ಬಂದ ಟ್ರಕ್ ಬೈಕಿಗೆ ಅಪ್ಪಳಿಸಿದ ಪರಿಣಾಮ ನವ ದಂಪತಿ ದಾರುಣವಾಗಿ ಮೃತಪಟ್ಟಿದ್ದಾರೆ.
ಮಂಗಳೂರು ಸಮೀಪದ ಬಜಾಲು ನಿವಾಸಿಗಳಾದ ರಯಾನ್ ಫೆರ್ನಾಂಡೀಸ್ (37) ಹಾಗೂ ಅವರ ಪತ್ನಿ ಪ್ರಿಯಾ ಫೆರ್ನಾಂಡೀಸ್ (32) ಅವರೇ ದಾರುಣ ಅಂತ್ಯ ಕಂಡ ನವ ದಂಪತಿಗಳು. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉದ್ಯೋಗಿಗಳಾಗಿರುವ ಇವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಉಳ್ಳಾಲದ ಬಂಗೇರಲೇನ್‍ನಲ್ಲಿರುವ ತಮ್ಮ ಬಾಡಿಗೆ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ಭೀಕರತೆಗೆ ಪ್ರಿಯಾ ಫೆರ್ನಾಂಡೀಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಗಾಯಗೊಂಡ ರಾಯನ್ ಫೆರ್ನಾಂಡೀಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿತ್ತು.
0 comments:
Post a Comment