ಬಂಟ್ವಾಳ, ಅ. 20, 2020 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಈ ಹಿಂದೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಜಾನುವಾರು ಸಾಗಾಟಕ್ಕೆ ಅಡ್ಡಿ ಪಡಿಸುವ ಮೂಲಕ ಹೆಸರು ಮಾಡಿ, ಬಳಿಕ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಗೊಂಡಿದ್ದ ಬಂಟ್ವಾಳ ಸಮೀಪದ ಭಂಡಾರಿ ಹಿತ್ಲು ನಿವಾಸಿ ಸುರೇಂದ್ರ ಭಂಡಾರಿ ಬಂಟ್ವಾಳ (39) ಬಂಟ್ವಾಳ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಸಮೀಪದ ವಸ್ತಿ ವಸತಿ ಸಂಕೀರ್ಣದ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮೂಲತಃ ಭಂಡಾರಿಬೆಟ್ಟು ನಿವಾಸಿಯಾಗಿರುವ ಸುರೇಂದ್ರ ಬಂಟ್ವಾಳ ಅವಿವಾಹಿತನಾಗಿದ್ದು, ಸದ್ಯ ಬಂಟ್ವಾಳ ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ವಸ್ತಿ ವಸತಿ ಸಂಕೀರ್ಣದ 5ನೇ ಮಹಡಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡು ವಾಸವಾಗಿದ್ದು, ನಿತ್ಯ ಅಲ್ಲೇ ವಾಸ್ತವ್ಯ ಹೊಂದಿದ್ದ. ಈ ಮನೆಗೆ ಬಂದ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸುರೇಂದ್ರನ ತಲೆ, ಹೊಟ್ಟೆ ಸಹಿತ ದೇಹದ ಇತರ ಭಾಗಗಳನ್ನು ಇರಿಯಲಾಗಿದೆ. ಮನೆಯ ಸೋಫಾದಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತದೇಹ ಪತ್ತೆಯಾಗಿದೆ. ಹತ್ಯೆ ನಡೆಸಿದ ಬಳಿಕ ಕೊಲೆಗಡುಕರು ಮನೆಯ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಪೂರ್ವನಿಯೋಜಿತವಾಗಿಯೇ ಈ ಕೊಲೆ ನಡೆಸಿದ ರೀತಿಯಲ್ಲಿದ್ದು, ಇದರಿಂದಾಗಿ ಘಟನೆ ಯಾರ ಗಮನಕ್ಕೂ ಬಂದಿಲ್ಲ. ಒಟ್ಟಾರೆ ಇದೊಂದು ವಂಚನಾ ಶೈಲಿಯಲ್ಲಿ ನಡೆಸಿದ ಕೃತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಬುಧವಾರ ಮಧ್ಯಾಹ್ನ ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ವಸತಿ ಸಂಕೀರ್ಣದಲ್ಲಿ ಅಳವಡಿಸಲಾದ ಸಿಸಿ ಟೀವಿ ಪೂಟೇಜ್‍ಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳವಾರ ರಾತ್ರಿ ಈ ಕೃತ್ಯ ನಡೆದಿದೆಯೋ ಅಥವಾ ಒಂದೆರಡು ದಿನಗಳ ಮೊದಲೇ ಕೃತ್ಯ ನಡೆಸಿ ಪರಾರಿಯಾಗಿದ್ದಾರಾ ಎಂಬುದು ಪೊಲೀಸ್ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.
ವಸತಿ ಸಂಕೀರ್ಣದ ಕೋಣೆಯಲ್ಲಿ ಪ್ರತಿನಿತ್ಯ ಸುರೇಂದ್ರ ತನ್ನ ಸ್ನೇಹಿತರ ಜೊತೆ ಬಂದು ಮಲಗಿ ಮರುದಿನ ಎದ್ದು ಮಂಗಳೂರಿನಲ್ಲಿ ನಡೆಸುತ್ತಿದ್ದ ಫೈನಾನ್ಸ್ ವ್ಯವಹಾರಕ್ಕೆ ತೆರಳುತ್ತಿದ್ದ ಎನ್ನಲಾಗಿದ್ದು, ಮಂಗಳವಾರ ರಾತ್ರಿ ಎಂದಿನಂತೆ ಅತನ ಆಪ್ತ ಸ್ನೇಹಿತರಿಬ್ಬರು ಆತನಿಗೆ ರಾತ್ರಿಯ ಭೋಜನ ತಂದುಕೊಟ್ಟು ತೆರಳಿದ್ದರೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಬೆಳಗ್ಗಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಕರೆ ಮಾಡಿದ್ದರೂ ಸುರೇಂದ್ರ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಕೊಲೆ ಕೃತ್ಯದ ಸಂಶಯ ಬಂದಿದೆ ಎನ್ನಲಾಗಿದೆ. ಅನುಮಾನಗೊಂಡ ಕೆಲವರು ಬುಧವಾರ ಮಧ್ಯಾಹ್ನ ವೇಳೆಗೆ ವಸತಿ ಸಂಕೀರ್ಣಕ್ಕೆ ಬಂದು ನೋಡಿದಾಗ ಮನೆಯ ಹೊರ ಭಾಗದಲ್ಲಿ ಬಾಗಿಲಿಗೆ ಬೀಗ ಹಾಕಲಾಗಿತ್ತು. ಕಿಟಕಿಯ ಮೂಲಕ ನೋಡಿದಾಗ ಸೋಫದ ಮೇಲೆ ರಕ್ತದ ಮಡುವಿನಲ್ಲಿ ಸುರೇಂದ್ರನ ಮೃತದೇಹ ಬಿದ್ದಿರುವುದು ಕಂಡು ಬಂದಿದೆ. ಅಮ್ಟಾಡಿ ಗ್ರಾಮದ ಕಲಾಯಿ ಎಂಬಲ್ಲಿ ಮನೆ ನಿರ್ಮಿಸಿ ಅಲ್ಲಿ ಅತನ ತಾಯಿ ಮತ್ತು ಸಹೋದರ ವಾಸಿಸುತ್ತಿದ್ದು ಸುರೇಂದ್ರ ಮಾತ್ರ ಕೊಲೆಯಾದ ಬಂಟ್ವಾಳದ ವಸತಿ ಸಂಕೀರ್ಣದಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ಎನ್ನಲಾಗಿದೆ.
ಈ ಹಿಂದೆ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ ಗೋ ರಕ್ಷಕ್ ಘಟಕದ ಪ್ರಮುಖನಾಗಿ ಸಕ್ರಿಯನಾಗಿದ್ದ. 2018 ರಲ್ಲಿ ಆತ ಸಂಘ ಪರಿವಾರದ ಒಳಗಿನ ವೈಷಮ್ಯದಿಂದ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ಜೊತೆ ವೈಷಮ್ಯ ಬೆಳೆಸಿಕೊಂಡಿದ್ದ. ಸಂಘಟನೆ ಹಾಗೂ ವೈಯುಕ್ತಿಕ ಮನಸ್ತಾಪ ವಿಕೋಪಕ್ಕೆ ತೆರಳಿದ ಪರಿಣಾಮ ಬಂಟ್ವಾಳ ಸಮೀಪದ ಬಡ್ಡಕಟ್ಟೆ ಜಂಕ್ಷನ್ನಿನಲ್ಲಿ ಹಿಂದೂ ಪರ ಸಂಘಟನೆಯ ಎರಡು ಗುಂಪುಗಳ ಮಧ್ಯೆ ಬೀದಿ ಕಾಳಗವೇ ನಡೆದಿತ್ತು. ಈ ಘಟನೆಯಲ್ಲಿ ಸುರೇಂದ್ರ ಬಂಟ್ವಾಳ ಬಂಧನಕ್ಕೊಳಗಾಗಿ ಜೈಲು ಸೇರಿದ್ದ.
ಬಳಿಕ ಸುರೇಂದ್ರ ತನ್ನ ಕೆಲ ಬೆಂಬಲಿಗರ ಜೊತೆ ಸೇರಿ ಕಳೆದ ವರ್ಷವಷ್ಟೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ. ಛಾಯಾಗ್ರಹಣ ಮೂಲಕ ವೃತ್ತಿ ಜೀವನ ಕಂಡುಕೊಂಡಿದ್ದ ಸುರೇಂದ್ರ ಬಂಟ್ವಾಳ ಜೊತೆ ಕೆಲವೊಂದು ಬಡ್ಡಿ ಹಾಗೂ ಹಣಕಾಸು ವ್ಯವಹಾರಗಳನ್ನೂ ನಡೆಸಿಕೊಂಡು ಬಂದಿದ್ದ. ಕೊಲೆ, ಕೊಲೆಯತ್ನ ಸಹಿತ ಹಲವು ಗಂಭೀರ ಪ್ರಕರಣಗಳು ಆತನ ಮೇಲಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದಾನೆ. ಹಿಂದೂ ಸಂಘಟನೆಯ ನಡುವೆ ವಿರಸ ಬೆಳೆಸಿಕೊಂಡ ಬಳಿಕ ಆತ ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿದು, ಕೇವಲ ವೈಯುಕ್ತಿಕ ವ್ಯವಹಾರದ ಜೊತೆಗೆ ಚಾಲಿಪೆÇೀಲಿಲು, ದಬಕ್ ದಬಾ ಐಸಾ ಎಂಬ ಎರಡು ತುಳು ಹಾಗೂ ‘ಸವರ್ಣದೀರ್ಘ ಸಂಧಿ ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸುವ ಮೂಲಕ ಕಲಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಇದೀಗ ಹಠಾತ್ ಆಗಿ ಆತನ ಕೊಲೆ ನಡೆದಿದ್ದು, ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಪೊಲೀಸ್ ತನಿಖೆಯ ಬಳಿಕವಷ್ಟೆ ಹಂತಕ ಜಾಡು ಪತ್ತೆ ಹಚ್ಚಿ ಕೊಲೆ ರಹಸ್ಯ ಬಯಲಾಗಬೇಕಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ ಲಕ್ಷ್ಮೀ ಪ್ರಸಾದ್, ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ನಗರ ಠಾಣಾ ಎಸ್ಸೈ ಅವಿನಾಶ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ, ಅಪರಾಧ ವಿಭಾಗದ ಎಸ್ಸೈಗಳಾದ ರಾಜೇಶ್, ಕಲೈಮಾರ್, ಸಂಜೀವ ಸಹಿತ ಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ಭೇದಿಸಲು ಮೂರು ಪೆÇಲೀಸ್ ತಂಡಗಳನ್ನು ರಚಿಸಲಾಗಿದ್ದು ಶೀಘ್ರವಾಗಿ ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗುವುದು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
0 comments:
Post a Comment