ಮಂಗಳೂರು, ಅ. 09, 2020 (ಕರಾವಳಿ ಟೈಮ್ಸ್) : ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಎಜುಕೇಶನ್ ಇದರ ಅಧೀನದ ಬಿ.ಎಡ್. ಪದವಿ, ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಕಾಮರ್ಸ್ ಇದರ 2020-21ನೇ ಸಾಲಿನ ಎಂ.ಬಿ.ಎ. ಹಾಗೂ ಎಂ.ಕಾಂ. ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದೆ.
ಬಿ.ಎಡ್. ಕೋರ್ಸಿನ ಸರಿತಾ ಕುಮಾರಿ ಎನ್ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಅರ್ಹರಾಗಿರುತ್ತಾರೆ. ಸುರೇಶ್ ಬಿ ದ್ವಿತೀಯ ರ್ಯಾಂಕ್, ಸೌಮ್ಯ ನಾಯಕ್ ತೃತೀಯ ರ್ಯಾಂಕ್, ವಿದ್ಯಾಶ್ರೀ ಪಿ. 4ನೇ ರ್ಯಾಂಕ್, ಚಿನ್ಮಯಿ ಜಿ. 5ನೇ ರ್ಯಾಂಕ್, ಸುಮಿತಾ ಕೆ. 6ನೇ ರ್ಯಾಂಕ್ ಪಡೆದಿದ್ದಾರೆ.
ಎಂ.ಬಿ.ಎ. ಕೋರ್ಸಿನ ವಿದ್ಯಾರ್ಥಿಗಳಾದ ರೇಶ್ಮಾ ಡಿ’ಸೋಜ ಪ್ರಥಮ, ಸಿಜಾಲ್ ಅಸಾದಲಿ ಖಾನ್ ದ್ವಿತೀಯ ಹಾಗೂ ವೈಶಾಲಿ ಗಜಾನನ್ ಪಾಲೆಕರ್ ತೃತೀಯ ರ್ಯಾಂಕ್ ಪಡೆದಿರುತ್ತಾರೆ.
ಎಂ.ಕಾ. ಕೋರ್ಸಿನ ವಿದ್ಯಾರ್ಥಿಗಳಾದ ಜೋಸ್ವಿಟಾ ಡಯಾನ ಡಿ’ಸೋಜ ಪ್ರಥಮ, ಕ್ಲೆವಿಟಾ ಟೀನಾ ಡಿ’ಸೋಜ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ ಎಂದು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಶಿಕ್ಷಣ ಮಹಾ ವಿದ್ಯಾಲಯದ ಡೀನ್ ಡಾ. ಜಯಶ್ರೀ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment