ಬೆಂಗಳೂರು, ಅ. 25, 2020 (ಕರಾವಳಿ ಟೈಮ್ಸ್) : ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಇದೇ ಮೊದಲ ಬಾರಿಗೆ ಎರ್.ಎಸ್.ಎಸ್. ಸಭೆಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಎರ್.ಎಸ್.ಎಸ್.) ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕೃಷ್ಣ ಪಾಲ್ಗೊಂಡರು.
ನಮ್ಮ ದೇಶದ ಚರಿತ್ರೆ, ಸಂಸ್ಕೃತಿಗೆ ಅಡಿಪಾಯ ಹಾಕಿ ಸಹಸ್ರಾರು ವರ್ಷಗಳಿಂದ ಬಂದಿರುವ ಹಿಂದೂ ಧರ್ಮದ ಸಿದ್ಧಾಂತವನ್ನು ದೇಶದ ಮುಂದೆ ಪ್ರಸ್ತುತ ಪಡಿಸುವಲ್ಲಿ ಆರೆಸ್ಸೆಸ್ ಪಾತ್ರ ಪ್ರಮುಖವಾಗಿದ್ದು, ಅದರ ಕಾರ್ಯಕರ್ತರಿಗೆ ನಾನು ಪ್ರಣಾಮ ಸಲ್ಲಿಸುವುದಾಗಿ ತಿಳಿಸಿದರು.
ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ವಿಚಾರ ಪ್ರಸ್ತಾಪಿಸಿದ ಮಾಜಿ ಸಿಎಂ ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕು ಎಂಬುದು ವಿವೇಕಾನಂದರ ಉಪದೇಶಗಳಲ್ಲಿ ಒಂದಾಗಿದೆ. ಏಕೆಂದರೆ ನಮ್ಮ ವಿದ್ಯಾಭ್ಯಾಸದ ಪದ್ಧತಿ ಆಂಗ್ಲ ಶಿಕ್ಷಣ ಪದ್ಧತಿ ಅಡಿಪಾಯದ ಮೇಲೆ ನಡೆಯುತ್ತಿದೆ. ಸಮಗ್ರ ಸುಧಾರಣೆ ಇನ್ನೂ ಆಗಿಲ್ಲ, ಭಾರತ ಸರಕಾರ ಉತ್ತಮ ಶಿಕ್ಷಣ ಪದ್ಧತಿ ದೇಶಕ್ಕೆ ಕೊಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಕೊಡುಗೆ ಬಹಳಷ್ಟಿದೆ ಎಂದರು.
ಅಮೆರಿಕ, ಜರ್ಮನಿಯಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪ್ರಾಪ್ತ ವಯಸ್ಕರು ಎರಡು ವರ್ಷಗಳ ಕಾಲ ದೇಶ ಸೇವೆ ಮಾಡಬೇಕೆಂಬ ಕಾನೂನು ಇದೆ. ನಮ್ಮ ದೇಶ ಸ್ವಾತಂತ್ರ್ಯಗೊಂಡ ನಂತರ ಕೆಲವರು ಈ ಸಿದ್ಧಾಂತಕ್ಕೆ ಕಟುಬಿದ್ದು ತಮ್ಮ ಪ್ರಾಣವನ್ನೇ ಅರ್ಪಿಸಿಕೊಂಡಿದ್ದಾರೆ. ದೇಶ ಅಭಿವೃದ್ಧಿ ಪಥದಲ್ಲಿ ಇಂತಹ ಸಿದ್ದಾಂತ ಪ್ರಮುಖವಾಗಿದೆ ಎಂದರು.
0 comments:
Post a Comment