ಮಂಗಳೂರು, ಅ. 17, 2020 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನ ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನನದಿಂದ ಅನುಗ್ರಹೀತವಾದ ರಬೀವುಲ್ ತಿಂಗಳು ಭಾನುವಾರ (ಅ. 18) ದಿಂದ ಆರಂಭವಾಗಲಿದ್ದು, ಅ. 29 ರಂದು ಬುಧವಾರ ಈದ್ ಮಿಲಾದ್ ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಖಾಝಿ ಶೈಖುನಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಹಾಗೂ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರು ಘೋಷಿಸಿದ್ದಾರೆ.
ಶನಿವಾರ ರಾತ್ರಿ ಚಂದ್ರದರ್ಶನವಾಗಿರುವುದನ್ನು ಖಚಿತಪಡಿಸಿದ ಖಾಝಿಗಳು ಈ ತೀರ್ಮಾನ ಕೈಗೊಂಡಿದ್ದಾರೆ. ಮುಂದಿನ ಒಂದು ತಿಂಗಳು ಸುನ್ನೀ ಮುಸ್ಲಿಮರು ಮನೆ, ಮಸೀದಿ, ಮದ್ರಸ ಮೊದಲಾದೆಡೆ ಪ್ರವಾದಿ ಪ್ರಕೀರ್ತನೆಗಳಿಂದ ಧನ್ಯಗೊಳಿಸಲಿದ್ದಾರೆ. ಅಲ್ಲದೆ ಬಡ-ಬಗ್ಗರಿಗೆ ಅನ್ನಾಹಾರ ಪಾನೀಯಗಳನ್ನು ವಿತರಿಸುವ ಮೂಲಕ ದಾನ-ಧರ್ಮಗಳನ್ನು ಹೆಚ್ಚಿಸಲಿದ್ದಾರೆ.
0 comments:
Post a Comment