ಮಂಗಳೂರು, ಅ. 10, 2020 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗವು ವಿಚಕ್ಷಣಾ ಸಪ್ತಾಹವನ್ನು ಅ. 27 ರಿಂದ ನ. 2ರವರೆಗೆ ನಡೆಸಲಿದೆ. ಸಾರ್ವಜನಿಕರಿಗೆ ಪರಿಪೂರ್ಣವಾದ ಸೇವೆ ಮತ್ತು ಅಂಚೆ ಸೇವೆಯ ಎಲ್ಲಾ ಹಂತಗಳಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಂಡು ಅತ್ಯುತ್ತಮ ಸೇವೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಅಂಚೆ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ವಿಚಕ್ಷಣಾ ಸಪ್ತಾಹದ ಈ ಅವಧಿಯಲ್ಲಿ ವೆಬಿನಾರ್ ಮೂಲಕ ವಿವಿಧ ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಹಾಗೂ ಶಿಬಿರಗಳು ನಡೆಯಲಿದ್ದು, ನೌಕರ ವೃಂದದಲ್ಲೂ ಮತ್ತು ಸಾರ್ವಜನಿಕರಲ್ಲೂ ವಿಚಕ್ಷಷಣಾ ಜಾಗೃತಿಯನ್ನು ಉಂಟು ಮಾಡಲು ಇವು ಪೂರಕವಾಗಿವೆ. ಅಂಚೆ ಸೇವೆಯಲ್ಲಿ ಯಾವುದೇ ನ್ಯೂನ್ಯತೆ ಹಾಗೂ ದೋಷಗಳು ಕಂಡು ಬಂದಲ್ಲಿ ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗದ ಮಿಂಚಂಚೆ domangalore.ka@indiapost.gov.in ಅಥವಾ ವಾಟ್ಸಪ್ ಸಂಖ್ಯೆ 9448291072ಗೆ ದೂರು ಅಥವಾ ಸಲಹೆಗಳನ್ನು ನೀಡಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
ಪ್ರಬಂಧ ಸ್ಪರ್ಧೆ
ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗದ ‘ವಿಚಕ್ಷಣಾ ಸಪ್ತಾಹ-2020’ದ ಅಂಗವಾಗಿ “ಜಾಗೃತ ಭಾರತ, ಸಮೃದ್ದ ಭಾರತ” ಎಂಬ ಶೀರ್ಷಿಕೆಯಡಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 10 ರಿಂದ 18 ವರ್ಷದ ಎಲ್ಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಬಂಧ 1000 ಪದಗಳಿಗೆ ಮೀರಬಾರದು. ಅ. 23ರೊಳಗೆ ಕೈ ಬರಹದ ಪ್ರಬಂಧವನ್ನು ಅಂಚೆ ಅಥವಾ ಇಮೇಲ್ ಮೂಲಕ ಕಳುಹಿಸಲು ಕೋರಲಾಗಿದೆ.
ಅಂಚೆ ಮೂಲಕ ಕಳುಹಿಸುವವರು ‘ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಅಂಚೆ ಭವನ, ಬಲ್ಮಠ, ಮಂಗಳೂರು-575002’ ಈ ವಿಳಾಸಕ್ಕೆ ಕಳುಹಿಸಬಹುದು ಹಾಗೂ ಇಮೇಲ್ ಕಳುಹಿಸುವವರು ಕೈಬರಹದ ಪ್ರತಿಯನ್ನು ಸ್ಕ್ಯಾನ್ ಮಾಡಿ ಇಮೇಲ್ ಐಡಿ domangalore.ka@indiapost.gov.in ಗೆ ಕಳುಹಿಸಬೇಕು. ಪ್ರಬಂಧ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿರಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment