ಬಂಟ್ವಾಳ, ಅ. 06, 2020 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಚಾಲನೆ ನೀಡಿದರು. 5 ಲಕ್ಷ ರೂಪಾಯಿ ವೆಚ್ಚದ ಐಸರಗೋಳಿ-ಪಾಂಗಳ ರಸ್ತೆ , 5 ಲಕ್ಷ ರೂಪಾಯಿ ವೆಚ್ಚದ ಕೋಟಿ ಕುಮೇರು ರಸ್ತೆ, 15 ಲಕ್ಷ ರೂಪಾಯಿ ವೆಚ್ಚದ ನೀರಪಳಿಕೆ-ಮುಕ್ಕುಡ ರಸ್ತೆ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಈ ಸಂಧರ್ಭ ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಸಂಜೀವ ಪೂಜಾರಿ, ಪ್ರಕಾಶ್ ಅಂಚನ್, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಚಿದಾನಂದ ರೈ, ಪುರುಷೋತ್ತಮ ಶೆಟ್ಟಿ, ಲಕ್ಷ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ಪೂವಪ್ಪ ಮೆಂಡನ್, ಬಾಲಕೃಷ್ಣ ಪೂಜಾರಿ, ಹರೀಶ್ ಪೂಜಾರಿ, ದಯಾನಂದ ಗೌಡ, ಶಾಲಿನಿ ಆಚಾರ್ಯ, ಶಶಿಧರ ಕೈಲಾರ್, ಆನಂದ ಕೋಟ್ಯಾನ್, ಪ್ರವೀಣ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment