ದುಬೈ, ಅ. 16, 2020 (ಕರಾವಳಿ ಟೈಮ್ಸ್) : ಏನೂ ಅರಿಯದ ನವಜಾತ ಶಿಶುವೊಂದು ವೈದ್ಯರ ಮಾಸ್ಕ್ ಹಿಡಿದೆಳೆದು ಕಿತ್ತೆಸೆಯಲು ಪ್ರಯತ್ನಿಸಿದ ಅಪರೂಪದ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇನ್ನೇನು ಮಾಸ್ಕ್ ರಹಿತ ದಿನಗಳು ಬರಲಿದೆ ಅಥವಾ ಕೊರೋನಾ ಮಹಾಮಾರಿಗೆ ಶೀಘ್ರದಲ್ಲೇ ಕೊನೆಗಾಣಲಿದೆ ಎಂಬ ಒಕ್ಕಣೆಯ ಮೂಲಕ ನೆಟ್ಟಿಗರು ಚಿತ್ರಕ್ಕೆ ಸಕತ್ ಕಾಮೆಂಟ್ ಮಾಡುತ್ತಿರುವುದು ಕಂಡು ಬರುತ್ತಿದೆ.
ನಜಜಾತ ಶಿಶು ವೈದ್ಯರ ಮುಖದ ಮೇಲಿರುವ ಮಾಸ್ಕ್ ಹಿಡಿದು ಎಳೆಯುತ್ತಿರುವ ಈ ಚಿತ್ರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವೈದ್ಯ ಸಮೀರ್ ಚೀಬ್ ಅವರು ತಮ್ಮ ಇನ್‍ಸ್ಟಾಗ್ರಾಂ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು-ಬಿಳುಪಿನ ಈ ಫೋಟೋಗೆ ವೈದ್ಯರು “ಶೀಘ್ರದಲ್ಲೇ ಮಾಸ್ಕ್ ತೆಗೆಯುವ ದಿನಗಳು ಮುನ್ಸೂಚನೆ ಸಿಕ್ಕಿದೆ” ಎಂದು ಅಡಿ ಬರಹ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೆ ಜನ ಲೈಕ್, ಕಾಮೆಂಟ್‍ಗಳ ಮಹಾಪೂರವನ್ನೇ ನೀಡುತ್ತಿದ್ದಾರೆ.
ಪ್ರಪಂಚ ಕೊರೊನಾ ಮಣಿಸಿ ಸಹಜ ಸ್ಥಿತಿಗೆ ಮರಳಲಿದೆ. ಈ ಚಿತ್ರ ಅದರ ಸಂಕೇತವಾಗಿದೆ ಎಂಬ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗುತ್ತಿದೆ. ಫೆÇೀಟೋ ಆಫ್ ದಿ ಇಯರ್, ಗಾಡ್ ಬ್ಲೆಸ್ ಯು ಎಂದು ಇನ್‍ಸ್ಟಾಗ್ರಾಮ್ ಬಳಕೆದರರೊಬ್ಬರು ಬರೆದುಕೊಂಡಿದ್ದಾರೆ.
0 comments:
Post a Comment