ರೂರ್ಕೆಲಾ, ಅ. 19, 2020 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) 2020ರಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿದ ಒಡಿಶಾದ ರೂರ್ಕೆಲಾ ವಿದ್ಯಾರ್ಥಿ ಶೋಯೆಬ್ ಅಫ್ತಾಬ್ ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದಾರೆ.
ಇವರ ಈ ಸಾಧನೆ ಹಿಂದೆ ದೀರ್ಘ ಸಮಯದ ಹೋರಾಟ, ಪೆÇೀಷಕರಾದ ಶೇಖ್ ಮೊಹಮ್ಮದ್ ಅಬ್ಬಾಸ್ ಮತ್ತು ಸುಲ್ತಾನ ರಝಿಯಾ ಅವರ ಸಾಕಷ್ಟು ಶ್ರಮವಿದೆ. ತಮ್ಮ ಸಂಕಷ್ಟದ ನಡುವೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಅಬ್ಬಾಸ್ ಮತ್ತು ರಝಿಯಾ ದಂಪತಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಶೋಯೆಬ್‍ನ 10 ವರ್ಷದ ಸೋದರಿ ಅಲಿಶಾ 5ನೇ ತರಗತಿಯಲ್ಲಿ ಓದುತ್ತಿದ್ದು, ಆಕೆ ಕೂಡ ಕಲಿಕೆಯಲ್ಲಿ ಮುಂದಿದ್ದಾಳೆ.
ಮೊಹಮ್ಮದ್ ಅಬ್ಬಾಸ್ ಪದವೀಧರ, ತಮ್ಮ ಮಕ್ಕಳು ಕೂಡ ಚೆನ್ನಾಗಿ ಓದಬೇಕು, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂದು 20 ವರ್ಷಗಳ ಹಿಂದೆ ಮಗ ಶೋಯೆಬ್‍ನ ಗರ್ಭವತಿಯಾಗಿದ್ದಾಗ ರಝಿಯಾಗೆ ಪದವಿ ಓದಿಸಿದ್ದರು. ಮದುವೆಯಾದ ನಂತರ ಹೆಣ್ಣು ಮಕ್ಕಳು ಏಕೆ ಓದಬೇಕೆಂದು ರಝಿಯಾ ಓದುವುದಕ್ಕೆ ನಮ್ಮ ಸಂಪ್ರದಾಯಸ್ಥ ಕುಟುಂಬ ಒಪ್ಪಿರಲಿಲ್ಲ, ಆಗ ನಮ್ಮ ಕುಟುಂಬದಿಂದ ಹೊರಬಂದು ಎಂಟೂವರೆ ವರ್ಷ ಬೇರೆ ವಾಸವಾಗಿದ್ದೆವು. ಈ ಮಧ್ಯೆ ರಿಝಿಯಾ ಶೋಯೆಬ್‍ಗೆ ಜನ್ಮ ನೀಡಿದಳು. ಬುರ್ದ್ವಾನ್ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದಳು. ಇದಕ್ಕಾಗಿ ಆಗಾಗ ರೂರ್ಕೆಲಾದಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಮಾಡುತ್ತಿದ್ದಳು ಎನ್ನುತ್ತಾರೆ ಅಬ್ಬಾಸ್.
ವೃತ್ತಿಯಲ್ಲಿ ಅಬ್ಬಾಸ್ ಉದ್ಯಮಿ. ಹಲವು ಏಳು ಬೀಳುಗಳನ್ನು ಕಂಡಿದ್ದಾರೆ, ಆದರೆ ಮಕ್ಕಳ ಭವಿಷ್ಯಕ್ಕೆ ಎಂದೂ ಇವರ ಕಷ್ಟ ಅಡ್ಡಿಯಾಗಲಿಲ್ಲ. ಇತ್ತೀಚೆಗೆ ಅವರು ಚಹಾ ಎಲೆ ಮಾರಾಟದಿಂದ ನಿರ್ಮಾಣ ಕೆಲಸಕ್ಕೆ ಕಾಲಿಟ್ಟಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಆದಾಯ ಕುಸಿದು ಹೋಗಿತ್ತಂತೆ. ಆಗ ಆರ್ಥಿಕವಾಗಿ ಕೋಲ್ಕತ್ತಾದಲ್ಲಿರುವ ಅತ್ತೆ-ಮಾವ ಸಹಾಯ ಮಾಡಿದರು ಎನ್ನುತ್ತಾರೆ.
ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ನೀಡಬೇಕೆಂದು ಕಷ್ಟಪಟ್ಟು ಪದವಿ ಮಾಡಿ ಮುಗಿಸಿದೆ, 2018ರಲ್ಲಿ ಮಕ್ಕಳ ಜೊತೆ ರಾಜಸ್ತಾನದ ಕೋಟಾಗೆ ಹೋಗಿ ಸರ್ವೋದಯ ಶಾಲೆಯಲ್ಲಿ ಪ್ರವೇಶ ಪಡೆದೆವು. ಅಲ್ಲಿ ಅಲ್ಲೆನ್ ಕೆರಿಯರ್ ಇನ್ಸ್‍ಟಿಟ್ಯೂಟ್‍ನಲ್ಲಿ ಶೋಯೆಬ್ ಮೆಡಿಕಲ್ ಕೋಚಿಂಗ್ ಪಡೆದನು. ಅಲ್ಲಿಯೇ ಎರಡು ವರ್ಷ ಇದ್ದು ಕೋಚಿಂಗ್ ಮುಗಿಸಿಕೊಂಡು ಊರಿಗೆ ಹೋದೆವು ಎನ್ನುತ್ತಾರೆ ತಾಯಿ ರಝಿಯಾ.
ಶೋಯೆಬ್‍ನ ಪೆÇೀಷಕರಲ್ಲಿದ್ದ ದೃಢ ನಿರ್ಧಾರದಿಂದ ಅವರ ಮಗನಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಶೋಯೆಬ್‍ನ ಬಾಲ್ಯ ಸ್ನೇಹಿತ ಅಪೆÇ್ರಝ್ ಅಹ್ಮದ್ ಹೇಳುತ್ತಾರೆ.
0 comments:
Post a Comment