ಮೂಡಬಿದ್ರೆ, ಅ. 26, 2020 (ಕರಾವಳಿ ಟೈಮ್ಸ್) : ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಮೂಡಬಿದ್ರೆ ಸಮಿತಿಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹಫೀಝ್, ಕಾರ್ಯದರ್ಶಿಯಾಗಿ ಇರ್ಶಾದ್ ಮಾಂತೂರು ಹಾಗೂ ಉಪಾಧ್ಯಕ್ಷರಾಗಿ ಸಾಬಿತ್ ಅವರು ಆಯ್ಕೆಯಾದರು.
ಭಾನುವಾರ ಇಲ್ಲಿನ ಡಿವೈಎಫ್‍ಐ ಕಛೇರಿಯಲ್ಲಿ ನಡೆದ ರಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಸಭೆಯಲ್ಲಿ ಮೂಡಬಿದ್ರೆ ಡಿ.ವೈ.ಎಫ್.ಐ ಉಪಾಧ್ಯಕ್ಷ ರಿಝ್ವಾನ್, ಡಿ.ವೈ.ಎಫ್.ಐ ಕಾರ್ಯದರ್ಶಿ ರಿಯಾಝ್ ಮಾಂತೂರು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment