ಬಂಟ್ವಾಳ, ಅ. 26, 2020 (ಕರಾವಳಿ ಟೈಮ್ಸ್) : ಫಿಟ್ನೆಸ್ ಮಲ್ಟಿಜಿಂ ಆಂಡ್ ಮಾರ್ಶಲ್ ಆಟ್ರ್ಸ್ ಸೆಂಟರ್ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸೆ. 28 ರಿಂದ ಅ. 25ರವರೆಗೆ ನಡೆದ ‘ಸೀಸನ್-1 ಮಿಸ್ಟರ್ ದಕ್ಷಿಣ ಕನ್ನಡ’ ಟ್ವೆಕಾಂಡೋ ಫೈಟಿಂಗ್ ಸ್ಪರ್ಧೆಯ ಅಂಡರ್-50, ಅಂಡರ್-60 ಹಾಗೂ ಅಂಡರ್-80 ವಿಭಾಗಗಳಲ್ಲಿ ಕ್ರಮವಾಗಿ ಯೂಸುಫ್ ಹಫೀಝ್ ಗುಡ್ಡೆಅಂಗಡಿ, ಮುಹಮ್ಮದ್ ರಾಫಿ ಆಲಡ್ಕ-ಪಾಣೆಮಂಗಳೂರು ಹಾಗೂ ಮುಹಮ್ಮದ್ ಸುಹೈಲ್ ಕಡಂಬು-ವಿಟ್ಲ ಅವರು ಮಿಸ್ಟರ್ ದಕ್ಷಿಣ ಕನ್ನಡ ಚಾಂಪಿಯನ್‍ಗಳಾಗಿ ಮೂಡಿ ಬಂದರು.
ಸ್ಪರ್ಧೆಯಲ್ಲಿ ಒಟ್ಟು 29 ಸ್ಪರ್ಧಾಳುಗಳು ಭಾಗವಹಿಸಿದ್ದು, ಅಂತಿಮ ಹಂತಕ್ಕೆ ಮೂರು ವಿಭಾಗಗಳಲ್ಲಿ ತಲಾ ಎರಡು ಮಂದಿ ಆಯ್ಕೆಯಾಗಿದ್ದರು. ಅಂಡರ್-50 ವಿಭಾಗದಲ್ಲಿ ರೈಫಾನ್ ಅಹ್ಮದ್ ಶಾಂತಿಅಂಗಡಿ ದ್ವಿತೀಯ ಹಾಗೂ ನಾಸಿರುದ್ದೀನ್ ಕಡಂಬು-ವಿಟ್ಲ ಅವರು ತೃತೀಯ ಸ್ಥಾನಿಯಾದರೆ, ಅಂಡರ್-60 ವಿಭಾಗದಲ್ಲಿ ವಿಲಾಯತ್ ರಾಫಿ ಗೂಡಿನಬಳಿ ದ್ವಿತೀಯ ಹಾಗೂ ತಮೀಝ್ ಬೋಗೋಡಿ ತೃತೀಯ ಸ್ಥಾನಿಯಾದರು. ಅಂಡರ-80 ವಿಭಾಗದಲ್ಲಿ ಮುಹಮ್ಮದ್ ಶಹಬಾನ್ ಕಾನ-ಕುಳಾಯಿ ದ್ವಿತೀಯ ಹಾಗೂ ಮುಹಮ್ಮದ್ ಶಾರೂಕ್ ಗೂಡಿನಬಳಿ ತೃತೀಯ ಸ್ಥಾನ ಪಡೆದುಕೊಂಡರು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಫಿಟ್ನೆಸ್ ಮಲ್ಟಿ ಜಿಮ್ ಆಂಡ್ ಮಾರ್ಶಲ್ ಆಟ್ಸ್ ಸಂಸ್ಥೆಯ ಸ್ಥಾಪಕ ಇಲ್ಯಾಸ್ ಪಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿಗಳಾದ ಆರಿಫ್ ನಂದಾವರ, ಅಶ್ಫಾಕ್ ಪಿ.ಎಂ., ಆರಿಫ್ ಗೂಡಿನಬಳಿ, ಇರ್ಫಾನ್ ಡಿಯರ್, ಜಿ.ಕೆ. ಹಿದಾಯತ್ ಗೂಡಿನಬಳಿ, ಇಮ್ರಾನ್ ಪಿ.ಎಂ., ಮುಹಮ್ಮದ್ ಶರೀಫ್ ಕಾನ-ಕುಳಾಯಿ, ಮುಹಮ್ಮದ್ ಅಶ್ರಫ್ ಅಕ್ಕರಂಗಡಿ, ಇಸ್ಮಾಯಿಲ್ ಶುಜಾ ನಂದಾವರ, ಮುಹಮ್ಮದ್ ಕೈಫ್ ಬೋಗೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ವೆಕಾಂಡೋ ರಾಜ್ಯ ಮಟ್ಟದ ಕ್ಯುರೋಗಿ ತೀರ್ಪುಗಾರ ಮಂಡಳಿ ಸದಸ್ಯ ಇಸಾಕ್ ಇಸ್ಮಾಯಿಲ್ ನಂದಾವರ, ದ.ಕ. ಜಿಲ್ಲಾ ಟ್ವೆಕಾಂಡೋ ತಂಡದ ಪದಕ ವಿಜೇತ ಸದಸ್ಯ ಮೊಹಮ್ಮದ್ ಶಾರೂಕ್ ಗೂಡಿನಬಳಿ, ಕರಾಟೆ ಬ್ಲ್ಯಾಕ್ ಬೆಲ್ಟ್ ಮತ್ತು ಜಿಲ್ಲಾ ಟ್ವೆಕಾಂಡೋ ಪದಕ ವಿಜೇತೆ ಫಾತಿಮಾ ಮುಸ್ಕಾನ್ ಹಾಗೂ ನಝೀರ್ ಅಹ್ಮದ್ ಕೆ.ಸಿ.ರೋಡು-ಕಲ್ಲಡ್ಕ ಅವರು ಸ್ಪರ್ಧಾ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಹಕರಿಸಿದರು.
ಫಿಟ್ನೆಸ್ ಮಲ್ಟಿ ಜಿಂ ತರಬೇತುದಾರರಾದ ರಫೀಕ್ ಮೆಜೆಸ್ಟಿಕ್, ಉಸ್ಮಾನ್ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಮೊದಲ ಬಾರಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ರಾಜ್ಯದ ಮಟ್ಟದ ಮಿನಿ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ವಿಜೇತರಾದ ಫಿಟ್ನೆಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಮುಝಮ್ಮಿರುಲ್ ಅಮೀನ್, ಮುಹಮ್ಮದ್ ಅಯಾನ್, ಮುಹಮ್ಮದ್ ಶಾಕಿಬ್, ಮುಹಮ್ಮದ್ ಹಿಶಾಂ ಅವರನ್ನು ಹಾಗೂ ಮಿಸ್ಟರ್ ದಕ್ಷಿಣ ಕನ್ನಡ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪದಕ ವಿಜೇತರಾದ ಮುಹಮ್ಮದ್ ನಬೀಲ್ ಬಂಟ್ವಾಳ, ಅಕ್ಷಯ ಪೂಜಾರಿ ಪಾಣೆಮಂಗಳೂರು ಹಾಗೂ ಮುಹಮ್ಮದ್ ಸಫ್ವಾನ್ ಬಂಟ್ವಾಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
0 comments:
Post a Comment