ಬಂಟ್ವಾಳ, ಅ 13, 2020 (ಕರಾವಳಿ ಟೈಮ್ಸ್) : ಕೋವಿಡ್ ವೈರಸ್ ಹಾಗೂ ಲಾಕ್‍ಡೌನ್ ಸಂದರ್ಭ ಜನ ಸಾಮಾನ್ಯರು ಅತಿಯಾದ ತೊಂದರೆಯನ್ನು ಅನುಭವಿಸುತ್ತಿದ್ದು, ಮೆಸ್ಕಾಂ ವಿದ್ಯುತ್ ಬಿಲ್ಲನ್ನು ಕಂತುಗಳಲ್ಲಿ ಸ್ವೀಕರಿಸಬೇಕು ಮತ್ತು ಸದ್ಯಕ್ಕೆ ಸಂಪರ್ಕವನ್ನು ಕಡಿತಗೊಳಿಸಬಾರದು ಹಾಗೂ ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ಮನೆ ಮನೆಗೆ ಸಮಪರ್ಕವಾಗಿ ಒತ್ತಾಯಿಸಿ ಮಾಣಿ ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಆಶ್ರಯದಲ್ಲಿ ಮಾಣಿ ಮೆಸ್ಕಾಂ ಶಾಖಾಧಿಕಾರಿಯವರಿಗೆ ಆಗ್ರಹಿಸಲಾಯಿತು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಇಬ್ರಾಹಿಂ ಕೆ ಮಾಣಿ, ರಮಣಿ, ಪ್ರೀತಿ ಡಿನ್ನಾ ಪಿರೇರಾ, ಸುನಂದ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಪ್ರಮುಖರಾದ ನಾಗರಾಜ ಪೂಜಾರಿ, ಹಸೈನಾರ್, ಮೂಸಾ ಕರೀಂ, ಹರೀಶ್ ಮಾಣಿ, ಅಬ್ದುಲ್ ಅಝೀಝ್ ಹಳೀರ ಮೊದಲಾದವರು ನಿಯೋಗದಲ್ಲಿದ್ದರು.
0 comments:
Post a Comment