ಮಂಗಳೂರು, ಅ. 18, 2020 (ಕರಾವಳಿ ಟೈಮ್ಸ್) : ಮೀನು ಸಾಗಾಟದ ಟೆಂಪೋದಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆ ಹಚ್ಚಿದ ಕಂಕನಾಡಿ ಠಾಣಾ ಪೊಲೀಸರು 12 ಟನ್ ಗೋಮಾಂಸ ವಶಪಡಿಸಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಪಡೀಲ್ ಬಳಿ ಟೆಂಪೋವನ್ನು ತಡೆದ ಪೊಲೀಸರು ಪ್ರಕರಣ ಪತ್ತೆ ಹಚ್ಚಿದ್ದಾರೆ. ಮೀನು ಸಾಗಾಟದ ಟೆಂಪೋದಲ್ಲಿ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಮಾಹಿತಿ ಪಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರೆನ್ನಲಾದ ಮಂದಿ ಟೆಂಪೋವನ್ನು ಅಡ್ಯಾರ್ ಬಳಿಯಿಂದ ಹಿಂಬಾಲಿಸಿದ್ದು, ಪೊಲೀಸರಿಗೂ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಡೀಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೃಹತ್ ಗೋಮಾಂಸ ಸಾಗಾಟ ಪ್ರಕರಣ ಬೇಧಿಸಿದ್ದಾರೆ.
ಟೆಂಪೋ ತಪಾಸಣೆ ನಡೆಸಿದಾಗ 12 ಟನ್ ಗೋಮಾಂಸ ಪತ್ತೆಯಾಗಿದ್ದು, ಪೋಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.
ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರು.
0 comments:
Post a Comment