ಮಂಗಳೂರು, ಅ. 28, 2020 (ಕರಾವಳಿ ಟೈಮ್ಸ್) : ಮಕ್ಕಿಮನೆ ಕಲಾವೃಂದ ಮಂಗಳೂರು ಇದರ ವತಿಯಿಂದ ಕೋವಿಡ್-19 ಲಾಕ್‍ಡೌನ್ ಸಂದರ್ಭ ಅನ್‍ಲೈನ್ ಮೂಲಕ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ನವರಾತ್ರಿ ದಸರಾ ಮಹೋತ್ಸವ-2020 ರ ಪ್ರಯುಕ್ತ ದಶದಿನ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅ. 26 ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶ್ರೀಪತಿ ಭಟ್, ಯುವರಾಜ್ ಜೈನ್, ರತ್ನಾಕರ ಜೈನ್, ವಿನ್ಸೆಂಟ್ ಡಿ’ಕೋಸ್ತ , ಶ್ವೇತಾ ಜೈನ್, ಶ್ವೇತಾ ಕುಮಾರಿ, ಸುಶಾಂತ್ ಕರ್ಕೇರ, ಅಶ್ವತ್ಥ್ ಕುಮಾರ್ ಜೈನ್, ಸಂತೋಷ ಕುಮಾರ್, ವೇಣುಗೋಪಾಲ್, ಮಹಾವೀರ ಜೈನ್ ಎಳನೀರು ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಿಮನೆ ಕಲಾವೃಂದದ ಮುಖ್ಯಸ್ಥ ಸುದೇಶ್ ಜೈನ್ ಮಕ್ಕಿಮನೆ ಸ್ವಾಗತಿಸಿ, ಶ್ರಾವ್ಯ ಕಿಶೋರ್ ಮುಚ್ಚುರು ವಂದಿಸಿದರು. ಸಾಂಧ್ಯ ಪಿ ಭಟ್ ನೆಲ್ಲಿತೀರ್ಥ ಹಾಗೂ ವೈಷ್ಣವಿ ಪಿ ಭಟ್ ನೆಲ್ಲಿತೀರ್ಥ ಪಾರ್ಥನೆ ನೆರವೇರಿಸಿದರು, ಪ್ರಜ್ಞಾ ಪ್ರಭು ವೇಣೂರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಿಮನೆ ಕಲಾವೃಂದ ಮಂಗಳೂರು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅನ್ ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳ ಪ್ರಶಸ್ತಿ ವಿಜೇತರ ವಿವರ
ಶ್ರೀ ಕೃಷ್ಣ ವೇಷ ಫೋಟೋ ಸ್ಪರ್ಧೆ ವಿಜೇತರು
ಪ್ರಥಮ ಸ್ಥಾನ : ಪ್ರಾಪ್ತಿ ಡಿ ಶೆಟ್ಟಿ ಮಂಗಳೂರು ಹಾಗೂ ನಿಹಾಂಶ್ ಆರ್ ದಾಸ್ ಮಂಗಳೂರು
ದ್ವಿತೀಯ ಸ್ಥಾನ : ಜನ್ವಿ ಶೆಟ್ಟಿ ಬೈಲೂರು ಕಾರ್ಕಳ
ತೃತೀಯ ಸ್ಥಾನ : ಶಾಶ್ವತ್ ಜೈನ್ ಶಿವಮೊಗ್ಗ ಹಾಗೂ ಯತ್ವಿಕ ಕೇಶವ ಪಚ್ಚನಾಡಿ
ಸಮಾಧಾನಕರ ಬಹುಮಾನಗಳು : ಸಾನ್ವಿ ಜೆ ಕೋಡಿಕಲ್, ನಿಯಾನ್ ಎಸ್ ಜೈನ್ ಬೆಂಗಳೂರು, ನಿಶ್ಕಾ ಡಿ ಏಳಿಂಜೆ, ಸಂಹಿತಾ ಮೂಡುಬಿದಿರೆ, ಲಾಸ್ಯ ಎಸ್ ಸನಿಲ್ ಎಕ್ಕೂರು
ಸಂಗೀತ ಸ್ಪರ್ಧೆಯ ವಿಜೇತರು
ಪ್ರಥಮ ಸ್ಥಾನ : ಸನ್ನಿಧಿ ಜೆ ಕೇಳ
ದ್ವಿತೀಯ ಸ್ಥಾನ : ಕವನ ಪಿ ಮಾರ್ನಾಡು
ತೃತೀಯ ಸ್ಥಾನ : ಆಧೀಶ್ ಪಿ ಮೂಡುಬಿದಿರೆ
ನೃತ್ಯ ಸ್ಪರ್ಧೆಯ ವಿಜೇತರು
ಪ್ರಥಮ ಸ್ಥಾನ : ಸಂಹಿತಾ ಎಂ. ಎಸ್ ಮೂಡುಬಿದಿರೆ ಹಾಗೂ ಸನ್ನಿಧಿ ಜೆ ಕೇಳ
ದ್ವಿತೀಯ ಸ್ಥಾನ : ಕಾವ್ಯ ಪಿ ಮಾರ್ನಾಡು
ತೃತೀಯ ಸ್ಥಾನ : ಚೇತನ್ ವೇಣೂರು
ಸಮಾಧಾನಕರ ಬಹುಮಾನಗಳು : ತನ್ವಿ ಮೂಡುಬಿದಿರೆ ಹಾಗೂ ಸ್ವಸ್ತಿಶ್ರೀ ಕದ್ರಿ
ಪ್ರಬಂಧ ಸ್ಪರ್ಧೆ ವಿಜೇತರು
ಪ್ರಥಮ ಸ್ಥಾನ : ಅಶ್ವಿನಿ ಸಂದೇಶ್ ಜೈನ್ ಲಾಯಿಲ ಬೆಳ್ತಂಗಡಿ
ದ್ವಿತೀಯ ಸ್ಥಾನ : ಪ್ರಸನ್ನಾ ಪ್ರಸಾದ್ ಭಟ್ ಪೇತ್ರಿ ಉಡುಪಿ
ತೃತೀಯ ಸ್ಥಾನ : ಬಿಂದು ದತ್ತಾತ್ರೇಯ ಹೆಗಡೆ ಶಿರಸಿ
0 comments:
Post a Comment