ಅಬುಧಾಬಿ, ಅ. 08, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್-2020 ಕೂಟದ 21ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ರನ್‍ಗಳಿಂದ ರೋಮಾಂಚಕವಾಗಿ ಪರಾಭವಗೊಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ್ತಾ ತಂಡ ರಾಹುಲ್ ತ್ರಿಪಾಠಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 167 ರನ್ ಪೇರಿದಿತು. 168 ರನ್ ಗುರಿ ಬೆನ್ನತ್ತಿದ್ದ ಚೆನ್ನೈ ತಂಡ ಉತ್ತಮ ಆರಂಭ ಪಡೆದರೂ ಮಿಡ್ಲ್ ಆರ್ಡರ್ ದಾಂಡಿಗರ ವೈಫಲ್ಯದಿಂದ ನಿಗದಿತ 20 ಓವರ್ ಗಳಲ್ಲಿ 157 ರನ್ ಮಾತ್ರ ಗಳಿಸಲು ಶಕ್ತವಾಗಿ 10 ರನ್‍ಗಳಿಂದ ವಿರೋಚಿತ ಸೋಲೊಪ್ಪಿಕೊಂಡಿತು.
ಚೆನ್ನೈ ತಂಡದ ಪ್ರಥಮ ವಿಕೆಟ್ ಆರಂಭದಲ್ಲೇ ಉರುಳಿದರೂ ದ್ವಿತೀಯ ವಿಕೆಟ್‍ಗೆ ಉತ್ತಮ ಜೊತೆಯಾಟ ನೀಡಿದ ಅಂಬಟಿ ರಾಯುಡು ಹಾಗೂ ಶೇನ್ ವ್ಯಾಟ್ಸನ್ ಅವರು ಚೆನ್ನೈ ತಂಡವನ್ನು ಆಧರಿಸಿದರು. ಬಳಿಕ ರಾಯುಡು 30 ರನ್ ಗಳಿಸಿ ಔಟ್ ಆದರು. ಅವರ ನಂತರ 50 ರನ್ ಗಳಿಸಿದ್ದ ವ್ಯಾಟ್ಸನ್ ಕೂಡ ಪೆವಿಲಿಯನ್ ಸೇರಿಕೊಂಡರು. ಇಬ್ಬರ ನಿರ್ಗಮನದ ಹೊರತಾಗಿಯೂ ಚೆನ್ನೈ ತಂಡ 104 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆ ನಂತರ ಬಂದ ಆಟಗಾರರ ವೈಫಲ್ಯ ತಂಡಕ್ಕೆ ವಿರೋಚಿತ ಸೋಲನ್ನು ಅನುಭವಿಸುವಂತೆ ಮಾಡಿತು. ಧೋನಿ ಹಾಗೂ ಸ್ಯಾಮ್ ಕರ್ರನ್ ಅವರಿಗೆ ಉತ್ತಮ ಅವಕಾಶ ಇತ್ತಾದರೂ ಕೆಕೆಆರ್ ಬೌಲರ್ ಗಳ ನಿಖರ ದಾಳಿಯ ಮುಂದೆ ಯಶಸ್ವಿಯಾಗಲಿಲ್ಲ.
0 comments:
Post a Comment