ಮಂಗಳೂರು, ಅ. 16, 2020 (ಕರಾವಳಿ ಟೈಮ್ಸ್) : ತಲಪಾಡಿ ಮತ್ತು ಕೋಟೆಕಾರು ಮೊಹಲ್ಲಾಗಳ ನೂತನ ಖಾಝಿಯಾಗಿ ಮಾಣಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರನ್ನು ಸ್ವೀಕರಿಸುವ ಸಮಾರಂಭ ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿಯಲ್ಲಿ ಶುಕ್ರವಾರ ಸಂಜೆ ನಡೆಯಿತು.
ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಖಾಝಿ ಸ್ವೀಕಾರ ನಡೆಸಿಕೊಟ್ಟರು. ತಲಪಾಡಿ ಹಾಗೂ ಕೋಟೆಕಾರು ವ್ಯಾಪ್ತಿಯ ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿ, ತಲಪಾಡಿ ಬಿಲಾಲ್ ಜುಮಾ ಮಸೀದಿ, ಮಾಡೂರು ಇಮಾದುದ್ದೀನ್ ಜುಮಾ ಮಸೀದಿ, ಪಂಜಳ ಅಲ್-ಬದ್ರಿಯಾ ಜುಮಾ ಮಸೀದಿ, ಪಿಲಿಕೂರು ಮುಹಿಯುದ್ದೀನ್ ಜುಮಾ ಮಸೀದಿ, ಕೆ.ಸಿ. ನಗರ ಅಲ್-ಹುದಾ ಜುಮಾ ಮಸೀದಿ, ಹಿದಾಯತ್ ನಗರ ಅಲ್-ಹಿದಾಯ ಜುಮಾ ಮಸೀದಿಗಳ ಖಾಝಿಯಾಗಿ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಆಧಿಕಾರ ಸ್ವೀಕರಿಸಿದರು.
ಎಸ್‍ವೈಎಸ್ ಮುಖಂಡ ಉಸ್ಮಾನ್ ಸಅದಿ ಪಟ್ಟೋರಿ ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿ ಮುದರ್ರಿಸ್ ಹುಸೈನ್ ಸಅದಿ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಮರ್ಕಝ್ ವಿದ್ಯಾರ್ಥಿ ಎ.ಕೆ. ಮುಹಮ್ಮದ್ ಮುಸ್ತಫ ಕೃಷ್ಣಾಪುರ ಅವರು ಬರೆದ “ಪ್ರವಾದಿ ರವರ ಶರೀರ ಸೌಂದರ್ಯ” ಪುಸ್ತಕವನ್ನು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಬಿಡುಗಡೆಗೊಳಿಸಿದರು. ಕಲ್ಕಟ್ಟ ಅಬ್ದುಲ್ ರಹ್ಮಾನ್ ರಝ್ವಿ, ಉಚ್ಚಿಲ ಜುಮಾ ಮಸೀದಿ ಮುದರ್ರಿಸ್ ಇಬ್ರಾಹಿಂ ಫೈಝಿ, ಕೆ.ಎಂ. ಅಬ್ಬಾಸ್ ಕೊಳಂಗೆರೆ, ಎನ್.ಎಸ್. ಉಮರ್ ಮಾಸ್ಟರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದರು.
ಎಂಎಸ್‍ಎಂ ಅಬ್ದುಲ್‍ರಶೀದ್ ಝೈನಿ ಸ್ವಾಗತಿಸಿ, ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿ ಖತೀಬ್ ಮುನೀರ್ ಸಖಾಫಿ ವಂದಿಸಿದರು.
0 comments:
Post a Comment